
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ಬಾರಿಯ ಚುನಾವಣೆ ವಿಷಯವಾಗಿ ನನ್ನ ನಿರ್ಧಾರವನ್ನು ಗುರುವಾರ ಪ್ರಕಟಿಸುವುದಾಗಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಏ.13ರಂದು ಕ್ಷೇತ್ರದ ಜನರ ಸಭೆ ಕರೆದಿದ್ದೇನೆ. ಸಭೆಯಲ್ಲಿ ಜನರು ಮುಳುಗು ಎಂದರೆ ಮುಳುಗುತ್ತೇನೆ, ತೇಲು ಎಂದರೆ ತೇಲುತ್ತೇನೆ. ಸ್ಪರ್ಧೆ ಮಾಡು ಎಂದರೆ ಮಾಡುತ್ತೇನೆ, ಮನೆಯಲ್ಲಿರು ಎಂದರೆ ಮನೆಯಲ್ಲಿರುತ್ತೇನೆ ಎಂದು ಹೇಳಿದರು.
20 ವರ್ಷ ಕ್ಷೇತ್ರದ ಜನರು ನನ್ನ ಜೊತೆಗಿದ್ದಾರೆ. ನನ್ನನ್ನು ಉನ್ನತ ಮಟ್ಟಕ್ಕೆ ಏರಿಸಿದ್ದಾರೆ. ಹಾಗಾಗಿ ಕ್ಷೇತ್ರದ ಜನರು ಏನು ಹೇಳುತ್ತಾರೋ ಅದನ್ನು ಕೇಳುತ್ತೇನೆ ಎಂದು ಸವದಿ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ