Kannada NewsKarnataka NewsLatest

ನನ್ನ ಸಂಕಲ್ಪ ನನ್ನ ಕ್ಷೇತ್ರದ ಅಭಿವೃದ್ಧಿ  – ಲಕ್ಷ್ಮಿ ಹೆಬ್ಬಾಳಕರ್

ಕ್ಷುಲ್ಲಕ ರಾಜಕಾರಣ ಮಾಡುವವರನ್ನು ಕ್ಷೇತ್ರದ ಜನರು ಸಹಿಸಿಕೊಳ್ಳುವುದಿಲ್ಲ ಎಂದ ಶಾಸಕಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಳೆದ 4 ವರ್ಷದಿಂದ ಆಗುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅನಗತ್ಯವಾಗಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕ್ಷೇತ್ರದ ಜನರು ಕಿವಿಗೊಡುವುದಿಲ್ಲ. ಜನರಿಗೆ ಅಭಿವೃದ್ಧಿ ಬೇಕಾಗಿದೆಯೇ ಹೊರತು ರಾಜಕೀಯವಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.
ಕ್ಷೇತ್ರದ ವಿವಿಧೆಡೆ ಮಂಗಳವಾರ ರಸ್ತೆ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು. ನಾನು ರಾಜಕಾರಣವನ್ನು ಚುನಾವಣೆಗಷ್ಟೇ ಸೀಮಿತಗೊಳಿಸಿದ್ದೇನೆ. ಬೇರೆ ಸಮಯದಲ್ಲಿ ಜನರ ಕಷ್ಟ, ಸುಖ ಹಾಗೂ  ಕ್ಷೇತ್ರದ ಅಭಿವೃದ್ಧಿ ಮುಖ್ಯ. ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವುದಾಗಿ ನಾನು ತೊಟ್ಟ ಸಂಕಲ್ಪದತ್ತ ನಾನು ಮುನ್ನುಗ್ಗುತ್ತಿದ್ದೇನೆ. ಅಭಿವೃದ್ಧಿಯಲ್ಲಿ ಪೈಪೋಟಿ ಮಾಡಿದರೆ ನಾನು ಒಪ್ಪುತ್ತೇನೆ. ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಕ್ಷೇತ್ರದ ಜನರು ಸಹಿಸುವುದಿಲ್ಲ ಎಂದು ಅವರು ಹೇಳಿದರು.
ಯಾರೇ ಆದರೂ ಪ್ರೀತಿ, ವಿಶ್ವಾಸ ಮತ್ತು ಅಭಿವೃದ್ಧಿ ಕೆಲಸಗಳ ಮೂಲಕ ಸಕಾರಾತ್ಮಕ ದೃಷ್ಟಿಕೋನದಿಂದ ಜನರ ಮನಸ್ಸನ್ನು ಗೆಲ್ಲಬೇಕು. ಅದನ್ನು ಬಿಟ್ಟು ಹತಾಶರಾಗಿ ಸುಳ್ಳು ಹೇಳುವವರನ್ನು, ಚುನಾವಣೆ ಹತ್ತಿರ ಬಂದಾಗಷ್ಟೆ ಜನರ ನೆನಪು ಮಾಡಿಕೊಳ್ಳುವವರನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ. ಅಂತವರ ಬಗ್ಗೆ ಯೋಚಿಸದೆ ನನ್ನ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಜನರು ಆ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ ಎಂದು ಹೆಬ್ಬಾಳಕರ್ ಮನವಿ ಮಾಡಿದರು.
​1.14 ಕೋಟಿ ರೂ. ಕಾಮಗಾರಿಗೆ ಚಾಲನೆ​
ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಬೇವಾಡಿ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ 26 ಲಕ್ಷ ರೂ,ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯ ನಿರ್ಮಾಣದ ಕಾಮಗಾರಿಗಳಿಗೆ ಮಂಗಳವಾರ ಲಕ್ಷ್ಮಿ ಹೆಬ್ಬಾಳಕರ್ ಭೂಮಿ ಪೂಜೆಯನ್ನು ನೆರವೇರಿಸಿದರು. 
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಪುಂಡಲೀಕ ಬಾಂದುರ್ಗಿ, ಸಂಗೀತಾ ಅಂಬೇಕರ್, ಲಕ್ಷ್ಮೀ ಯಳಗುಕರ್, ಅಮುಲ ಬಾತ್ಕಂಡೆ, ಸುವರ್ಣ ಲೋಹಾರ, ಸುಭಾಷ್ ನಾಯ್ಕ, ಶಿವಾಜಿ ಕಾಂಬಳೆ, ಯಲ್ಲಪ್ಪ ಲೋಹಾರ, ಆರತಿ ನಾವಿ, ನಾರಾಯಣ ಲೋಹಾರ, ಅಶೋಕ ಯಳಗುಕರ್, ವಿಕ್ರಂ ತರಳೆ, ರಾಜು ಕೊಚೆರಿ, ಇಂಜಿನಿಯರ್ ಪತ್ತಾರ, ರೋಜಗಾರ್ ಗ್ರುಪ್, ರಾಜಶೇಖರ್, ಭರ್ಮೋಜಿ, ಮಲ್ಲೇಶ ಚೌಗುಲೆ, ಬಾಗಣ್ಣ ನರೋಟಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ನಂತರ ಮಣ್ಣೂರ ಗ್ರಾಮದಲ್ಲಿ  ಕರ್ನಾಟಕ ನೀರಾವರಿ ನಿಗಮದ ವತಿಯಿಂದ 25 ಲಕ್ಷ ರೂ,ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯ ನಿರ್ಮಾಣದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ನಾರಾಯಣ ಶಹಾಪೂರಕರ್,  ಮೃಣಾಲ ಹೆಬ್ಬಾಳಕರ್, ನಾರಾಯಣ ಕಪಕುದ್ರಿ, ಮುಕುಂದ ತರಳೆ, ದತ್ತು ಚೌಗುಲೆ, ಅಶೋಕ ಚೌಗುಲೆ, ಮಧುಕರ್ ಚೌಗುಲೆ, ಸುಚಿತಾ ಸಾಂಬ್ರೇಕರ್, ಸರಿತಾ ನಾಯ್ಕ್, ಲತಾ ಕಡೋಲ್ಕರ್, ಲಕ್ಷ್ಮೀ ಸಾಂಬ್ರೇಕರ್, ಜಯಶ್ರೀ ನಾಯ್ಕ್, ದೀಪಾ ಚೌಗುಲೆ, ಜಯಶ್ರೀ ತೋರೆ, ರಾಮಾ ಚೌಗುಲೆ, ಜ್ಯೋತಿಬಾ ಶಹಾಪೂರಕರ್, ಉಮೇಶ ಚೌಗುಲೆ, ಸಂದೀಪ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
​ 
ಬೆಳಗಾವಿ ಗ್ರಾಮೀಣ ಕ್ಷೇತ್ರದ ಅತವಾಡ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಯ ನಿರ್ಮಾಣದ ಸಲುವಾಗಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ 35 ಲಕ್ಷ ರೂ,ಗಳು ಬಿಡುಗಡೆಯಾಗಿದ್ದು,​ಅಲ್ಲಿ ಸಹ ಲಕ್ಷ್ಮಿ ಹೆಬ್ಬಾಳಕರ್ ಭೂಮಿ ಪೂಜೆಯನ್ನು ನೆರವೇರಿಸುವ ಮೂಲಕ  ಕಾಮಗಾರಿಗಳಿಗೆ ಚಾಲನೆಯನ್ನು ನೀ​ಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು,​ ಯುವರಾಜ ಕದಂ, ಮೃಣಾಲ ಹೆಬ್ಬಾಳಕರ್,​ ಮಲ್ಲಪ್ಪ ಪಾಟೀಲ, ಮಾರುತಿ ಬೆಳಗಾಂವ್ಕರ, ಕಲ್ಪನಾ ಕಾಂಬಳೆ, ಭರ್ಮಾ ವರಕೇರಿ, ಚಬುಬಾಯಿ ಕಾಂಬಳೆ, ಕಲ್ಲಪ್ಪ ಕಡೋಲ್ಕರ್, ಮಾರುತಿ ಹೆಬ್ಬಾಳಕರ್, ಲಕ್ಷ್ಮಣ ಹೆಬ್ಬಾಳಕರ್, ವಸಂತ ಕಣಬರ್ಕರ, ನಾಗೋಜಿ ಕನಬರ್ಕರ, ಶಂಕರ ಕಾಂಬಳೆ, ಬಾಬು ಕಾಂಬಳೆ, ದಾಜಿಬಾ ಪಾಟೀಲ, ಅಶೋಕ‌ ಪಾಟೀಲ, ನರೇಗಾ ಗ್ರುಪ್ ನವರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಸೋಮವಾರ ಸಂಜೆ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಲೋಕೋಪಯೋಗಿ ‌ಇಲಾಖೆಯ ವತಿಯಿಂದ 28 ಲಕ್ಷ ರೂ,ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣದ ಕಾಮಗಾರಿಗಳಿಗೆ ಲಕ್ಷ್ಮಿ ಹೆಬ್ಬಾಳಕರ್ ಭೂಮಿ ಪೂಜೆಯನ್ನು ನೆರವೇರಿಸಿ ಚಾಲನೆಯನ್ನು‌ ನೀಡಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಗ್ರಾಮಸ್ಥರು, ಸ್ಥಳೀಯ ಜನಪ್ರತಿನಿಧಿಗಳು, ಗುತ್ತಿಗೆದಾರರಾದ ಶಿವಾಜಿ ದಂಡಗಲ್ಕರ್, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button