ಪ್ರಗತಿ ವಾಹಿನಿ ಸುದ್ದಿ, ನವದೆಹಲಿ –
ನನಗೆ ಸಾಮಾನ್ಯವಾಗಿ ಸಿಟ್ಟು ಬರೋಲ್ಲ, ಆದರೆ ನನ್ನ ಧ್ವನಿಯೇ ಏರು ಧ್ವನಿಯಾಗಿದೆ, ಇದು ಮ್ಯಾನ್ಯುಫ್ಯಾಕ್ಚರಿಂಗ್ ಡಿಫೆಕ್ಟ್ ಎಂದು ಕೇಂದ್ರ ಗೃಹ ಸಚಿವ ಅಮೀತ್ ಶಾ ನಗೆ ಚಟಾಕಿ ಹಾರಿಸಿದ ಘಟನೆ ಲೋಕಸಭೆಯಲ್ಲಿ ಸೋಮವಾರ ನಡೆಯಿತು.
ಸೋಮವಾರ ಲೋಕಸಭೆಯುಲ್ಲಿ ಕ್ರಿಮಿನಲ್ ಪ್ರೊಸೀಜರ್ ಬಿಲ್ ೨೦೨೨ಅನ್ನು ಮಂಡನೆ ಮಾಡುವ ವೇಳೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾಯಿತು. ಪ್ರತಿಪಕ್ಷಗಳ ಸವಾಲಿಗೆ ಅಮೀತ್ ಆ ಉತ್ತರಿಸುತ್ತಿದ್ದರು. ಈ ವೇಳೆ ತೃಣಮೂಲ ಕಾಂಗ್ರೆಸ್‌ನ ಸಂಸದರೊಬ್ಬರು ಅಮೀತ್ ಷಾ ಕೋಪದಿಂದ ಉತ್ತರ ನೀಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಆರೋಪಿಸಿದರು.
ತೃಣಮೂಲ ಕಾಂಗ್ರೆಸ್ ಎಂಪಿಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅಮೀತ್ ಷಾ ಕಾಶ್ಮೀರ ವಿಷಯ ಹೊರತುಪಡಿಸಿ ಇನ್ಯಾವುದೇ ವಿಚಾರಕ್ಕೆ ನನಗೆ ಕೋಪ ಬರುವುದೇ ಇಲ್ಲ. ನನ್ನ ಧ್ವನಿಯೇ ಏರು ಧ್ವನಿಯಾಗಿದೆ, ಇದು ಮ್ಯಾನ್ಯುಫ್ಯಾಕ್ಚರಿಂಗ್ ಡಿಫೆಕ್ಟ್ ಹೊರತು ಸಿಟ್ಟಲ್ಲ, ಪ್ರತಿ ಪಕ್ಷದವರಿಗೆ ಯಾವುದೇ ಪ್ರಶ್ನೆ ಕೇಳಲು ಹಕ್ಕಿದೆ ಎಂದರು. ಅಮೀತ್ ಷಾ ಮಾತಿಗೆ ಪಕ್ಷ ಬೇಧ ಮರೆತು ಲೋಕಸಭಾ ಸದಸ್ಯರು ನಗೆಗಡಲಲ್ಲಿ ತೇಲಿದರು.
ಮತ್ತೆ ಬೆಳಗಾವಿ ಜಿಲ್ಲೆ ವಿಭಜನೆ ಕೂಗು ; ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ