Kannada NewsKarnataka NewsLatest

ಮೈಸೂರು- ದರ್ಬಾಂಗ್ ಎಕ್ಸಪ್ರೆಸ್ ರೈಲು ಅಪಘಾತ: ಹೊತ್ತಿ ಉರಿದ ಬೋಗಿಗಳು

ಪ್ರಗತಿವಾಹಿನಿ ಸುದ್ದಿ, ಚೆನ್ನೈ: ಮೈಸೂರು – ದರ್ಬಾಂಗ್ ಎಕ್ಸಪ್ರೆಸ್ ರೈಲು ಮತ್ತು ಸರಕು ಸಾಗಣೆ ರೈಲಿನ ನಡುವೆ ಡಿಕ್ಕಿ ಸಂಭವಿಸಿ 3 ಬೋಗಿಗಳು ಹೊತ್ತಿ ಉರಿದಿವೆ. 5 ಬೋಗಿಗಳು ಹಳಿ ತಪ್ಪಿವೆ.

ಕೆಲವೇ ಕ್ಷಣಗಳ ಮೊದಲು ಚೆನ್ನೈ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೆ ಬರಬೇಕಿದೆ. ಬೆಳಗ್ಗೆ 10.30ಕ್ಕೆ ಮೈಸೂರಿನಿಂದ ಹೊರಟಿದ್ದ ಮೈಸೂರು – ದರ್ಬಾಂಗ್ ಪ್ರಯಾಣಿಕರ ರೈಲಾಗಿದ್ದು, ಇನ್ನೊಂದು ಸರಕು ಸಾಗಣೆ ರೈಲು. ಸಾವು- ನೋವಿನ ಕುರಿತು ಇನ್ನಷ್ಟೆ ತಿಳಿಯಬೇಕಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.

ಅಪಘಾತ ಅತ್ಯಂತ ಭಯಾನಕವಾಗಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ಪ್ರಯಾಣಿಕರೋರ್ವರು ಮಾಹಿತಿ ನೀಡಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button