
ಹೊರನಾಡು ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ
ರವೀಂದ್ರ ತೋಟಿಗೇರ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಪತ್ರಕರ್ತರ ವೇದಿಕೆ ಬೆಂಗಳೂರು ಇವರ ಮಾಧ್ಯಮ ಪ್ರ‍್ರಾಯೋಜಕತ್ವದಲ್ಲಿ ಹೈದರಾಬಾದ ಕರ್ನಾಟಕ ನಾಗರೀಕರ ವೇದಿಕೆ, ಬೆಂಗಳೂರು ಹಾಗೂ ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರ, ಬೆಂಗಳೂರು ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಬರುವ ಸಪ್ಟೆಂಬರ್ 21 ಮತ್ತು 22 ರಂದು ಮಂತ್ರಾಲಯದ 9ನೇ ಆಂದ್ರಪ್ರದೇಶ ಹೊರನಾಡು ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನವನ್ನು ಆಯೋಜಿಸಲಿದೆ.
ಮಂತ್ರಾಲಯದಲ್ಲಿ ಜರುಗುವ ಶ್ರೀ.ರಾಘವೇಂದ್ರ ಸಾಂಸ್ಕೃತಿಕ ವೈಭವ ಮತ್ತು ಆಂದ್ರಪ್ರದೇಶದ ಹೊರನಾಡು ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನಕ್ಕೆ ಬೆಳಗಾವಿಯ ಖ್ಯಾತ ನ್ಯಾಯಾವಾದಿಗಳು, ಗಡಿಚಿಂತಕ ಗಡಿತಜ್ಞ ಹಾಗೂ ಕನ್ನಡ ನುಡಿ ಸೇವಕ ಡಾ. ರವೀಂದ್ರ ನಿಂಗಪ್ಪ ತೋಟಿಗೇರ ಅವರನ್ನು ಸರ್ವಾಧ್ಯಕ್ಷರನ್ನಾಗಿ ಕಾರ್ಯಕಾರಿಣಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಈ ಸಾಂಸ್ಕೃತಿಕ ಸಮ್ಮೇಳನದಲ್ಲಿ ಹೊರನಾಡು ಕನ್ನಡಿಗರ ಸಂವಾದ ಮತ್ತು ಗಡಿ ಕನ್ನಡಿಗರ ಸಮಸ್ಯೆಗಳ ಕುರಿತು ವಿಚಾರ ಸಂಕಿರಣ, ಹೊರನಾಡಿನಲ್ಲಿ ಕನ್ನಡ ಭಾಷೆಯ ಬೆಳವಣಿಗೆ ಕುರಿತು ಚರ್ಚಾ ಗೋಷ್ಠಿ, ಅಂತರರಾಜ್ಯ ಕವಿ ಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಗಳು ಜರುಗಲಿವೆ.///