
ಪ್ರಗತಿವಾಹಿನಿ ಸುದ್ದಿ: ಒಂದೆಡೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ವಸಕ್ಕೆ ಸಿದ್ಧತೆಗಳು ಆರಂಭವಾಗಿವೆ. ಅಕ್ಟೋಬರ್ 3ರಿಂದ 12ರವರೆಗೆ ಅದ್ದೂರಿ ದಸರಾ ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅರಮನೆ ನಗರಿ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಇನ್ನೊಂದೆಡೆ ಮೈಸೂರು ಅರಮನೆ ವೀಕ್ಷಣೆಗೆ ಪ್ರವಾಸಿಗರಿಗೆ ವಿಶೇಷ ಅನುಕೂಲ ಕಲ್ಪಿಸಲಾಗಿದೆ.
ಇನ್ಮುಂದೆ ಮೈಸೂರು ಅರಮನೆ ವೀಕ್ಷಣೆಗೆ ಮೊಬೈಲ್ ವಾಟ್ಸಪ್ ನಲ್ಲಿಯೇ ಟಿಕೆಟ್ ಸಿಗಲಿದೆ. ಈ ಸೌಲಭ್ಯ ಇಂದಿನಿಂದಲೇ ಜಾರಿಗೆ ಬಂದಿದೆ. ಅರಮನೆ ನೋಡಲು ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಸರ್ಕಾರ EDCS ಮೊಬೈಲ್ ಒನ್ ಯೋಜನೆ ಆರಂಭಿಸಿದೆ. ಈ ಮೂಲಕ ಮೊಬೈಲ್ ನಲ್ಲೇ ಟಿಕೆಟ್ ಖರೀದಿ ಮಾಡಬಹುದಾಗಿದೆ.
ಮೈಸೂರು ಅರಮನೆ ವೀಕ್ಷಣೆಗೆ ವಾಟ್ಸಪ್ ನಲ್ಲಿ ಟಿಕೆಟ್ ಪಡೆಯಲು ಹೀಗೆ ಮಾಡಿದರೆ ಸಾಕು.
ಸರ್ಕಾರದ EDCS ಮೊಬೈಲ್ ಒನ್ ಯೋಜನೆ ಮೂಲಕವಾಗಿ ಮೈಸೂರು ಅರಮನೆ ವೀಕ್ಷಣೆಗೆ ಟಿಕೆಟ್ ಪಡೆದುಕೊಳ್ಳಬಹುದು. ವಾಟ್ಸಪ್ ನಲ್ಲಿ 8884160088 ಸಂಖ್ಯೆಗೆ ಎಜಿ ಎಂದು ಟೈಪ್ ಮಾಡಿ ಸಂದೇಶ ಕಳುಹಿಸುವ ಮೂಲಕ ಟಿಕೆಟ್ ಪಡೆಯಬಹುದು.
ಹೀಗೆ ವಾಟ್ಸಪ್ ನಲ್ಲಿ ಖರೀದಿಸಿದ ಟಿಕೆಟ್ ಗೆ 5 ದಿನಗಳವರೆಗೆ ಮಾನ್ಯತೆ ನೀಡಲಾಗಿದೆ. ಐದು ದಿನಗಳಲ್ಲಿ ಯಾವಾಗಬೇಕಾದರು ಈ ಟಿಕೆಟ್ ಮೂಲಕ ಅರಮನೆ ವೀಕ್ಷಿಸಬಹುದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ