EducationKarnataka NewsLatest
*ಶಿಕ್ಷಕಿಗೆ ಅಶ್ಲೀಲ ಮೆಸೇಜ್ ರವಾನೆ: ಶಿಕ್ಷಕ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ: ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಮಂಚಕ್ಕೆ ಕರೆದಿದ್ದ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿರುವ ಘಟನೆ ರಾಯಚೂರು ಹೊರವಲಯದಲ್ಲಿ ನಡೆದಿದೆ.
ಮೆಹಬೂಬ್ ಅಲಿ ಅಮಾನತುಗೊಂಡಿರುವ ಶಿಕ್ಷಕ. ರಾಯಚೂರು ಹೊರವಲಯದ ಆದರ್ಶ ಸರ್ಕಾರಿ ಶಾಲೆಯ ಸಹ ಶಿಕ್ಷಕ ಹಾಗೂ ಪ್ರಭಾರಿ ಶಿಕ್ಷಕನಾಗಿದ್ದ. ಆದರ್ಶ ಶಾಲೆಯ ಅತಿಥಿ ಶಿಕ್ಷಕಿಗೆ ಅಶೀಲ ಮೆಸೇಜ್ ಕಳುಹಿಸಿ, ಮಂಚಕ್ಕೆ ಕರೆದಿದ್ದ. ಶಿಕ್ಷಕನ ಕಿರುಕುಳದ ಬಗ್ಗೆ ಶಿಕ್ಷಕಿ ಮನೆಯಲ್ಲಿ ಹೇಳಿದ್ದರು.
ವಿಷಯ ತಿಳಿಯುತ್ತಿದ್ದಂತೆ ಶಿಕ್ಷಕಿಯ ಕುಟುಂಬ ಹಾಗೂ ಸಾರ್ವಜನಿಕರು ಶಿಕ್ಷಕ ಮೆಹಬೂಬ್ ಅಲಿಯನ್ನು ಹಿಡಿದು ಧರ್ಮದೇಟು ನೀಡಿದ್ದರು. ಶಿಕ್ಷಕಿ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಪ್ರಕರಣ ಬೆಳಕಿಗೆ ಬರುತ್ತಿದ್ದಂರೆ ರಾಯಚೂರು ಡಿಡಿಪಿಐ ಕೆ.ಡಿ.ಬಡಿಗೇರ್, ಶಿಕ್ಷಕ ಮೆಹಬೂಬ್ ಅಲಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.



