Latest

ಮೊದಲ ಪತಿಯ ಮೇಲಿನ ದ್ವೇಷಕ್ಕೆ ಹೆತ್ತ ಮಗಳನ್ನೇ ಕೊಂದ ತಾಯಿ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಹೆತ್ತ ಮಗಳನ್ನೇ ತಾಯಿ ಉಸಿರುಗಟ್ಟಿಸಿ ಸಾಯಿಸಿರುವ ಹೃದಯ ವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ.

ಪವಿತ್ರಾ ಮಗಳನ್ನೇ ಹತ್ಯೆಗೈದ ತಾಯಿ. ಜಯಲಕ್ಷ್ಮಿ (6) ತಾಯಿಯಿಂದಲೇ ಹತ್ಯೆಯಾದ ಬಾಲಕಿ. ಪವಿತ್ರಾಗೆ ಜಯಲಕ್ಷ್ಮಿ ಮೊದಲ ಪತಿಯ ಮಗಳಾಗಿದ್ದು, ಪತಿಯ ಮೇಲಿನ ಧ್ವೇಷವನ್ನು ಮಗಳ ಮೇಲೆ ತೀರಿಸಿಕೊಂಡಿದ್ದಾಳೆ ಎನ್ನಲಾಗಿದೆ.

ಆರೋಪಿ ಪವಿತ್ರಾ ಎಂಟು ವರ್ಷಗಳ ಹಿಂದೆ ಸಿದ್ದೇಶ್ ಜೊತೆ ಮದುವೆಯಾಗಿದ್ದಳು. ಆದರೆ ಪವಿತ್ರಾ ಮೊದಲ ಪತಿ ಬದುಕಿರುವಾಗಲೇ ಸೂರ್ಯ ಎಂಬಾತನ ಜೊತೆ ಮತ್ತೊಂದು ವಿವಾಹವಾಗಿದ್ದಳಲ್ಲದೇ ಎರಡನೆ ಪತಿಯಿಂದ ಇನ್ನೊಂದು ಮಗುವಾಗಿತ್ತು. ಹೀಗಾಗಿ ಮೊದಲ ಪತಿಗೆ ಜನಿಸಿದ ಮಗಳು ಜಯಲಕ್ಷ್ಮಿ ಮೇಲೆ ಪವಿತ್ರಾ ದ್ವೇಷ ಬೆಳೆಸಿಕೊಂಡಿದ್ದಳು. ಇದೇ ಹಿನ್ನೆಲೆಯಲ್ಲಿ ಮಗಳು ಮಲಗಿದ್ದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಈ ಕೊಲೆಗೆ ಪವಿತ್ರಾ ಎರಡನೇ ಪತಿ ಸೂರ್ಯ ಹಾಗೂ ತಾಯಿ ಗೌರಮ್ಮ ಸಹಾಯ ಮಾಡಿದ್ದರು.

ಅನುಮಾನ ಬಾರದಂತೆ ಮಗಳ ಅಂತ್ಯ ಸಂಸ್ಕಾರ ಕೂಡ ನೆರವೇರಿಸಿದ್ದಳು. ಮಗಳು ಕಾಣದಿದ್ದಾಗ ಮೊದಲ ಪತಿ ಸಿದ್ದೇಶ್ ಮೇಟಗಳ್ಳಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ತಂದೆ ನೀಡಿದ ದೂರಿನ ಮೇರೆಗೆ ಮೇಟಗಳ್ಳಿ ಪೊಲೀಸರು ತನಿಖೆ ನಡೆಸಿದ್ದು, ಹೂತಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದಾಗ ಅಸಹಜ ಸಾವು ಎಂಬುದು ತಿಳಿದುಬಂದಿದೆ.

Home add -Advt

ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ಪವಿತ್ರಾಗೆ ಮೊದಲ ಪತಿಯ ಮಗಳು ಜಯಲಕ್ಷ್ಮಿ ಕಂಡರೆ ದ್ವೇಷ ಸಾಧಿಸುತ್ತಿದ್ದು, ಎರಡನೆ ಪತಿಯ ಮಗಳನ್ನು ಇಷ್ಟಪಡುತ್ತಿದ್ದಳು. ಇದೇ ಕಾರಣದಿಂದ ಮೊದಲ ಮಗಳನ್ನು ಸಾಯಿಸಿದ್ದಾಳೆ ಎಂಬ ವಿಷಯ ಬಹಿರಂಗವಾಗಿದೆ.

Related Articles

Back to top button