Latest

ನಾಯಿಗಳ ಮೇಲೆ ರಾಸಾಯನಿಕ ಅಸ್ತ್ರ ಪ್ರಯೋಗ ಮಾಡುತ್ತಿದ್ದ ಒಸಾಮಾ ಬಿಲ್ ಲಾಡೆನ್

ಪ್ರಗತಿವಾಹಿನಿ ಸುದ್ದಿ, ಕತಾರ್: ವೈಜ್ಞಾನಿಕ ಪ್ರಯೋಗಗಳಿಗಾಗಿ ಪ್ರಾಣಿಗಳನ್ನು ಬಳಸುವುದು ಸಾಮಾನ್ಯವಾಗಿತ್ತು. ಆದರೆ ಅಮೆರಿಕ ಸೈನ್ಯದಿಂದ ಹತ್ಯೆಗೀಡಾದ ಭಯೋತ್ಪಾದಕ ಸಂಘಟನೆ ಅಲ್ -ಖಾಯ್ದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ರಾಸಾಯನಿಕ ಅಸ್ತ್ರಗಳನ್ನು ತನ್ನ ಸಾಕು ನಾಯಿಗಳ ಮೇಲೆ ಪ್ರಯೋಗಿಸುತ್ತಿದ್ದ ಎಂಬ ವಿಷಯ ಈಗ ಬಹಿರಂಗಗೊಂಡಿದೆ.

ಲಾಡೆನ್ ಪುತ್ರರಲ್ಲೊಬ್ಬರಾದ ಓಮರ್ ಈ ವಿಷಯವನ್ನು ಕತಾರ್‌ಗೆ ಭೇಟಿ ನೀಡಿದಾಗ ‘ದಿ ಸನ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

Home add -Advt

ತನ್ನ ತಂದೆ ತನ್ನ ಹೆಜ್ಜೆಗಳನ್ನು ಅನುಸರಿಸಲು ತರಬೇತಿ ನೀಡುತ್ತಿದ್ದರು. ಅಫ್ಘಾನಿಸ್ತಾನದಲ್ಲಿ ಬಾಲ್ಯದಲ್ಲಿ ಬಂದೂಕುಗಳನ್ನು ಚಲಾಸಲು ಮತ್ತು ರಾಸಾಯನಿಕ ಅಸ್ತ್ರಗಳನ್ನು ಪರೀಕ್ಷಿಸಲು ತನ್ನ ನಾಯಿಗಳನ್ನು ಬಳಸುತ್ತಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ.

ಬಿನ್ ಲಾಡೆನ್‌ನ ನಾಲ್ಕನೇ ಹಿರಿಯ ಮಗನಾದ ಒಮರ್ ತಾನು “ಬಲಿಪಶು” ಎಂದು ಹೇಳಿಕೊಂಡಿದ್ದಲ್ಲದೆ,   ತನ್ನ ತಂದೆಯೊಂದಿಗಿನ ‘ಕೆಟ್ಟ ಸಮಯ’ವನ್ನು ಮರೆಯಲು ಪ್ರಯತ್ನಿಸಿರುವುದಾಗಿ ಹೇಳಿಕೊಂಡಿದ್ದಾರೆ.

ವಿಶ್ವದಾಖಲೆ ನಿರ್ಮಿಸಿದ ಪಾಕಿಸ್ತಾನದ ಜಾಹಿದ್ ಮೊಹಮ್ಮದ್

Related Articles

Back to top button