Wanted Tailor2
Cancer Hospital 2
Bottom Add. 3

*ದಸರಾ ಕ್ರೀಡಾಕೂಟದ ಹಳೇ ನೆನಪುಗಳನ್ನು ಬಿಚ್ಚಿಟ್ಟ ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಮೈಸೂರು: ನನ್ನ 14 ನೇ ವಯಸ್ಸಿನಲ್ಲಿ ದಸರಾ ಕ್ರೀಡಾಕೂಟದ ಜೂನಿಯರ್ ವಿಭಾಗದ ಜಾವಲಿನ್ ಎಸೆತ ಮತ್ತು 14.5 ಕಿಲೋ ಮೀಟರ್ ದೂರದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಸೋತು ಮನೆಗೆ ಹೋಗಿದ್ದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹಳೆಯ ನೆನಪನ್ನು ಮೆಲುಕು ಹಾಕಿದರು.

ಮೈಸೂರು ದಸರಾ ಕ್ರೀಡಾಕೂಟ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು “ನೀವು ಕುಳಿತ ಜಾಗದಲ್ಲೇ ನಾನು ಕುಳಿತುಕೊಂಡಿದ್ದೆ. ಗ್ರಾಮೀಣ ಭಾಗದಿಂದ ಬಂದಂತಹ ನೀವೆಲ್ಲಾ ನನ್ನಂತೆ ನಾಯಕರಾಗಿ ಹೊರಹೊಮ್ಮಬೇಕು. ಕ್ರೀಡಾ ಕ್ಷೇತ್ರದಲ್ಲಿ ಭಾರತಕ್ಕೆ ಆಸ್ತಿಗಳಾಗಿ ಬೆಳಗಬೇಕು ಎಂದು ಸ್ಪೂರ್ತಿಯ ಮಾತುಗಳನ್ನಾಡಿದರು.

ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಮಹದೇವಪ್ಪ ಅವರ ಮನವಿ ಮೇರೆಗೆ ಬಂದು ಸಂತೋಷದಿಂದ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿದ್ದೇ‌ನೆ. ಕ್ರೀಡಾಕೂಟದ ಉದ್ಘಾಟನೆ ಮಾಡಿದ್ದು ಬಹಳ ಸಂತಸ ನೀಡಿತು ಎಂದು ಹೇಳಿದರು.

ಒಲಂಪಿಕ್ ಅಸೋಸಿಯೇಶನ್ ಅಧ್ಯಕ್ಷರಾದ ಗೋವಿಂದರಾಜು ಅವರು, ಕ್ರೀಡಾ ಸಚಿವರಾದ ನಾಗೇಂದ್ರ ಅವರು ಕ್ರೀಡಾಪಟುಗಳಿಗೆ ಉತ್ತಮವಾದ ಸಮವಸ್ತ್ರಗಳನ್ನ ನೀಡಿದ್ದಾರೆ. ನಾವುಗಳು ಒಂದು ಶೂ ತೆಗೆದುಕೊಳ್ಳಲು ಪರದಾಡುವಂತಹ ಸ್ಥಿತಿಯಿತ್ತು. ಇಂದು ನಿಮ್ಮ ಪೋಷಕರು ಬೆಂಬಲ ನೀಡಿದ ಕಾರಣಕ್ಕೆ ಇಲ್ಲಿಗೆ ಬಂದಿದ್ದೀರಿ, ಅವಕಾಶ ಕಳೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

ಶ್ರಮ ಪಡದೆ ಯಾವುದೂ ದಕ್ಕುವುದಿಲ್ಲ. ಶ್ರಮ ಇದ್ದ ಕಡೆ ಫಲವಿದೆ. ಗಣಪತಿಯನ್ನು ಪೂಜಿಸಿದ ತಕ್ಷಣ ವಿದ್ಯೆ ಬರುವುದಿಲ್ಲ‌, ಹಗಲು ಹೊತ್ತು ಶ್ರಮ ಪಡಬೇಕು. ಈಗ ಸ್ಪರ್ದೆ ತಾಲ್ಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಇಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿದೆ. ನೀವೆಲ್ಲಾ ಗ್ಲೋಬಲ್ ಮಟ್ಟಕ್ಕೆ ಬೆಳೆಯಬೇಕು ಎಂದು ತಿಳಿಸಿದರು.

Bottom Add3
Bottom Ad 2

You cannot copy content of this page