*ಕರ್ನಾಟಕವನ್ನು ತಾಲಿಬಾನ್, ಬಾಂಗ್ಲಾ ಆಗಲು ಬಿಡಬೇಡಿ: ಶಾಸಕ ಸುನೀಲ್ ಕುಮಾರ್ ಆಕ್ರೋಶ*
ಪ್ರಗತಿವಾಹಿನಿ ಸುದ್ದಿ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿರ್ಜನೆಯ ವೇಳೆ ನಡೆದ ಗಲಭೆ ಪ್ರಕರಣದಿಂದ ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸೀದಿಯ ಮೇಲಗಡೆಯಿಂದ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಹಿಂದು ಅಂಗಡಿಗಳನ್ನು ಟಾರ್ಗೆಟ್ ಮಾಡಿ ಬೆಂಕಿ ಹಚ್ಚಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗಲಾಟೆಯಾಗಿದ್ದರೂ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಸಣ್ಣ ಗಲಾಟೆ ಎನ್ನುವುತ್ತಿದ್ದಾರೆ. ಇದು ಪೂರ್ವ ನಿಯೋಜಿತ ಕೃತ್ಯ ಎಂದು ಕಿಡಿಕಾರಿದರು.
ಗಣೇಶೋತ್ಸವ ಸಮಿತಿ ಹಾಗೂ ಪದಾಧಿಕಾರಿಗಳ ಮೇಲೆ ಕೇಸ್ ಹಾಕುವ ಕಾಂಗ್ರೆಸ್ ಸರಕಾರ ಮಸೀದಿಯ ಮೇಲೆ ಏಕೆ ಪ್ರಕರಣ ದಾಖಲಿಸಿಲ್ಲ. ಮಸೀದಿಯಿಂದಲೂ ಕಲ್ಲು ಎಸೆದಿದ್ದಾರೆ.ಸರಕಾರದವರು ಕರ್ನಾಟಕವನ್ನು ತಾಲಿಬಾನ್, ಬಾಂಗ್ಲಾ ಆಗಲು ಬಿಡಬೇಡಿ. ಗಣೇಶೋತ್ಸವ ವಿಜೃಂಭಣೆಯಿಂದ ನಡೆಯಬೇಕು ಎಂದರು.
ಹಿಂದು ಅಂಗಡಿ ಸುಟ್ಟು ಹಾಕಿದ್ದಾರೆ. ಆ ಅಂಗಡಿಯವರಿಗೆ ಪರಿಹಾರ ಕೊಡಬೇಕು. ಗಣೇಶೋತ್ಸವ ಸಮಿತಿಯ ಮೇಲಿನ ಪ್ರಕರಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಯಾದಾಗಿನಿಂದಲೂ ಆರ್ಥಿಕತೆ ಕುಸಿದು ಬಿದ್ದಿದೆ. ಬೆಲೆ ಏರಿಕೆ ಹೊರೆ ಜನಸಾಮಾನ್ಯರ ಮೇಲೆ ಹಾಕಿ. ಹಲವು ಯೋಜನೆಗಳಿಗೆ ಕತ್ತರಿ ಹಾಕಲು ಹೋರಟಿದ್ದಾರೆ. ಈಗ 11 ಲಕ್ಷ ರೇಷನ್ ಕಾರ್ಡ್ ತೆಗೆದು ಹಾಕಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸದಸ್ಯತ್ವ ಅಭಿಯಾನ ಆರಂಭವಾಗಿದೆ. ಕರ್ನಾಟಕಲ್ಲಿ ಒಂದೂವರೆ ಕೋಟಿ ಬಿಜೆಪಿ ಸದಸ್ಯನ್ನು ಸೇರ್ಪಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಈ ವೇಳೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ್, ಶಾಸಕ ವಿಠ್ಠಲ್ ಹಲಗೇಕರ, ವಿಧಾನ ಪರಿಷತ್ತಿನ ಸದಸ್ಯ ಹನುಮಂತ ನಿರಾಣಿ, ಮಾಜಿ ಶಾಸಕರಾದ ಸಂಜಯ ಪಾಟೀಲ್, ಅರವಿಂದ ಪಾಟೀಲ್, ಮಾಜಿ ಸಂಸದೆ ಮಂಗಲಾ ಅಂಗಡಿ, ಬಿಜೆಪಿ ಮುಖಂಡ ಮುರುಗೇಂದ್ರಗೌಡ ಪಾಟೀಲ್, ಹನುಮಂತ ಕೊಂಗಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ