SportsWorld

*ವಿಶ್ವದ ದೈತ್ಯಾಕಾರದ ಬಾಡಿಬಿಲ್ಡರ್ ನಿಧನ*

ಪ್ರಗತಿವಾಹಿನಿ ಸುದ್ದಿ: ವಿಶ್ವದ ಅತ್ಯಂತ ದೈತ್ಯಾಕಾರದ ಬಾಡಿಬಿಲ್ಡರ್ ಆಗಿದ್ದ ಲಿಯಾ ‘ಗೊಲೆಮ್ ಯೆಫಿಸ್ಟಿಕ್ ಕೊನೆಯುಸಿರೆಳೆದಿದ್ದಾರೆ.

36 ವರ್ಷದ ಲಿಯಾ “ಗೊಲೆಮ್” ಯೆಫಿಮ್ಮಿಕ್ ಅವರಿಗೆ ಸೆಪ್ಟೆಂಬರ್ 6 ರಂದು ಹೃದಯಾಘಾತವಾಗಿತ್ತು. ಅಂದಿನಿಂದ ಕೋಮಾಗೆ ಹೋಗಿದ್ದ ಅವರು ಸೆಪ್ಟೆಂಬ‌ರ್ 11ರಂದು ಮೃತಪಟ್ಟಿದ್ದಾರೆ.

Home add -Advt

ವಿಶ್ವದ “ಅತ್ಯಂತ ದೈತ್ಯಾಕಾರದ ಬಾಡಿಬಿಲ್ಡರ್” ಎಂದು ಕರೆಯಲ್ಪಡುವ ಯೆಫಿಸ್ಟಿಕ್ ಅವರ ಬೃಹತ್ ಗಾತ್ರ ಮತ್ತು ಅಸಾಧಾರಣ ಶಕ್ತಿಗೆ ಹೆಸರುವಾಸಿಯಾಗಿದ್ದರು. ಅವರ ಪ್ರಭಾವಶಾಲಿ ಮತ್ತು ಭವ್ಯವಾದ ಮೈಕಟ್ಟುಗೆ ಜನಪ್ರಿಯತೆ ಪಡೆದಿದ್ದರು. 6 ಅಡಿ 1 ಇಂಚು ಎತ್ತರ ಮತ್ತು 340 ಪೌಂಡ್ ತೂಕದ ಅವರು 61-ಇಂಚಿನ ಎದೆ ಮತ್ತು 25- ಇಂಚಿನ ಬೈಸೆಪ್‌ಗಳನ್ನು ಹೊಂದಿದ್ದರು.

ವರದಿಗಳ ಪ್ರಕಾರ, ಮನೆಯಲ್ಲಿದ್ದ ಸಂದರ್ಭದಲ್ಲಿ ಯೆಫಿಸ್ಟಿಕ್ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಪತ್ನಿ ಅನ್ನಾ ಅಂಬುಲೆನ್ಸ್‌ಗೆ ಕರೆಮಾಡಿದ್ದರು. ಆದರೆ ಅಂಬುಲೆನ್ಸ್ ಬರುವುದರೊಳಗೆ ಯೆಫಿಸ್ಟಿಕ್ ಕುಸಿದುಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಹಾರ್ಟ್ ಅಟ್ಯಾಕ್ ಜೊತೆ ಬ್ರೇನ್ ಕೂಡ ಡೆಡ್ ಆಗಿದೆ ಎಂದು ಹೇಳಿದ್ದಾರೆ.

Related Articles

Back to top button