ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ರೈತ ಉತ್ಪಾದಕ ಕೇಂದ್ರ ರೂಪಿಸಲು ಸದ್ಗುರುಗಳು ಮುಂದಾಗಿದ್ದು, ನಮ್ಮ ಸರ್ಕಾರ ನೂರಕ್ಕೆ ನೂರು ಅವರಿಗೆ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈಶಾ ಫೌಂಡೇಶನ್ ನಿರ್ಮಿಸಿರುವ ನಾಗ ಮಂಟಪವನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರದಲ್ಲಿ ರೈತರ ಆದಾಯ ಎರಡು ಪಟ್ಟು ಮಾಡುವ ಕಾರ್ಯ ಪೂರ್ಣವಾದ ನಂತರ ಸರ್ಕಾರ ಇಡೀ ರಾಜ್ಯಾದ್ಯಂತ ಮಾದರಿಯಾಗಿ ವಿಸ್ತರಿಸುತ್ತದೆ ಎಂದರು. ಸದ್ಗುರುಗಳು ನೀಡಿದ್ದ ಮಣ್ಣು ಉಳಿಸಿ ಪುಸ್ತಕವನ್ನು ಪರಿಸರ ಇಲಾಖೆಗೆ ನೀಡಿ ಕಾರ್ಯಕ್ರಮ ರೂಪಿಸಲಾಗಿದೆ. ಈ ಉದ್ದೇಶಕ್ಕಾಗಿ 100 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಹಾಗೂ ಮಣ್ಣು ಉಳಿಸಲು ಮಹತ್ವ ನೀಡಲಾಗಿದೆ ಎಂದರು. ಅಧಿಕಾರಿಗಳು ಯೋಜನೆ ಯಶಸ್ವಿಗೊಳಿಸಿದರೆ ಇನ್ನಷ್ಟು ಅನುದಾನ ನೀಡುವ ಭರವಸೆ ನೀಡಿರುವುದಾಗಿ ಅವರು ತಿಳಿಸಿದರು.
ಸದ್ಗುರುಗಳು ಕಾರ್ಮಿಕರ ಶ್ರಮಕ್ಕೆ ರೈತರ ಬೆವರಿಗೆ ಬೆಲೆ ಕೊಡುವ ಮಾತಾನಾಡಿದ್ದಾರೆ. ಮಾನವ ಕಲ್ಯಾಣಕ್ಕೆ ಹಾಕುವ ಎಲ್ಲಾ ಕಾರ್ಯಕ್ರಮಗಳಿಗೆ ಕರ್ನಾಟಕ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತದೆ ಇದೊಂದು ಮಾದರಿ ಪ್ರೇರಣಾ ಕೇಂದ್ರವಾಗಿ ವಿಶ್ವಮಟ್ಟದಲ್ಲಿ ಬೆಳೆಯಲಿ ಎಂದರು.
ಮಾದರಿ ಕ್ಷೇತ್ರವಾಗಿ ವಿಶ್ವಮಟ್ಟದಲ್ಲಿ ಬೆಳೆಯಲಿ:
ಚಿಕ್ಕಬಳ್ಳಾಪುರ ಹಾಗೂ ಕೊಲಾರ ಭಾಗದಲ್ಲಿ ಅನೇಕ ವರ್ಷಗಳಿಂದ ನೀರಿನ ಬವಣೆ ಇತ್ತು. ಕಳೆದ ಒಂದೂವರೆ ವರ್ಷದಿಂದ ಎಲ್ಲಾ ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ನಮ್ಮ ಆಡಳಿತ ಕಾಲದಲ್ಲಿ ಮರು ಭೂಮಿ ಕೃಷಿ ಭೂಮಿ ಯಾಗಿ ಪರಿವರ್ತನೆಯಾಗಿರುವುದು ಸಂತಸ ತಂದಿದೆ. ಯೋಗ ಕೇಂದ್ರ ಮುಂತಾದವು ಇಲ್ಲಿ ಸ್ಪಾಪನೆಯಾಗುತ್ತಿದೆ. ನಾಲ್ಕು ತಿಂಗಳಲ್ಲಿ ಆದಿಗುರು ಮೂರ್ತಿ ನಿರ್ಮಾಣ ಮಾಡಿರುವುದು ದೇವರ ಆಶೀರ್ವಾದ ಎಂದರು.
ಸದ್ಗುರುಗಳು ಕಂಡಿರುವ ಹೊರ ಜಗತನ್ನು ಎಲ್ಲರಿಗಾಗಿ ಸೃಷ್ಟಿಸಿದ್ದಾರೆ. ಅವರೊಬ್ಬ ಮಹಾನ್ ಸೃಷ್ಟಿಕರ್ತ. ಕ್ರಿಯಾಶೀಲತೆ ಇದೆ. ಅವರಲ್ಲೊಬ್ಬ ಕಲಾವಿದರಿದ್ದಾರೆ. ನಾಗಮಂಟಪ ದಿಂದ ಎಲ್ಲವೂ ಅವರ ಸೃಷ್ಟಿಯ ಫಲಿತಾಂಶ. ಸಣ್ಣ ವಿಚಾರಗಳಲ್ಲಿ ಅವರು ಹೀಗೆ ಮಾಡಲು ಅವರಲ್ಲಿರುವ ವಿನ್ಯಾಸಕಾರನಿದ್ದಾನೆ. ದೇವರು ಕೂಡ ಒಬ್ಬ ವಿನ್ಯಾಸಕಾರ. ದೇವರು ಸೃಷ್ಟಿಸಿರುವ ತಂತ್ರಾಂಶ ವನ್ನು ಲೋಕಕಲ್ಯಾಣಕ್ಕೆ ಉಪಯೋಗವಾಗಲು ಸದ್ಗುರುಗಳನ್ನು ಅನುಸರಿಸಬೇಕು. ಅವರು ಮಾನವೀಯ ಮೌಲ್ಯಗಳನ್ನು ಉಳ್ಳ ವ್ಯಕ್ತಿ. ಮಣ್ಣು ಉಳಿಸಿದರೆ ಭವಿಷ್ಯದ ಮಾನವನನ್ನು ಉಳಿಸಲು ಸಾಧ್ಯ ಎಂದು ಮಣ್ಣು ಉಳಿಸಿ ಅಭಿಯಾನ ಕೈಗೊಂಡಿದ್ದಾರೆ ಎಂದರು.
ಜ್ಞಾನ ಮತ್ತು ಕರ್ಮದಿಂದ ಸಾಧನೆ ಮಾಡುವವರಿಗೆ ಅವಕಾಶ ಮುಂದಿನ ಪೀಳಿಗೆಗೆ ಆಧ್ಯಾತ್ಮಿಕ ಹಾಗೂ ತತ್ವಜ್ಞಾನದ ಕೇಂದ್ರವನ್ನು ರೂಪಿಸುವುದು ಸದ್ಗುರುಗಳ ಉದ್ದೇಶ. ನಾವು ಮುಂದಿನ ಜನಾಂಗಕ್ಕೆ ಏನು ಬಿಟ್ಟು ಹೋಗುತ್ತೇವೆ ಎನ್ನುವುದು ಮುಖ್ಯ. ಜನ ಸಾಮಾನ್ಯರ ಮಿತಿಗಳು ಅವರಿಗೆ ಗೊತ್ತಿದೆ. ಜ್ಞಾನದಿಂದ ಸಾಧನೆ ಮಾಡುವುದು ಬೇರೆ , ಕರ್ಮದಿಂದ ಸಾಧನೆ ಮಾಡುವುದು ಬೇರೆ ಇದೆ. ಜ್ಞಾನ ಮತ್ತು ಕರ್ಮದಿಂದ ಸಾಧನೆ ಮಾಡುವವರಿಗೆ ಇಲ್ಲಿ ಅವಕಾಶವಿದೆ. ಬಹಳ ಅದ್ಬುತವಾದ ಕಲ್ಪನೆ. ನಾನು ಪ್ರತಿ ಸಾರಿ ಅವರನ್ನು ಭೇಟಿ ಮಾಡಿದಾಗ ವೈಚಾರಿಕವಾಗಿ ಚರ್ಚೆ ಮಾಡಿದಾಗ ಜ್ಞಾನ, ಪ್ರಶ್ನೆಗಳಿಗೆ ಉತ್ತರ ದೊರಕಿದೆ ಎಂದರು.
ಶ್ರೇಷ್ಠ ಚಿಂತನೆ:
112 ನಾಗದೇವತೆಗಳಲ್ಲಿ ಅಮರತ್ವವಿದೆ. ಸೃಷ್ಟಿಯ ಅಮರತ್ವವನ್ನು ಇಲ್ಲಿ ಬಿಂಬಿಸಲಾಗಿದೆ. ಶ್ರೇಷ್ಠ ಚಿಂತನೆ ಇಲ್ಲಿ ಮೂಡಿ ಬಂದಿದೆ. ಹಿಂದೆ ಇದ್ದದ್ದು ನಾಗರಿಕತೆ, ಏನಾಗಿದ್ದೇವೆ ಎನ್ನುವುದು ಸಂಸ್ಕೃತಿ, ಇಲ್ಲಿಗೆ ಬಂದರೆ ನಾವೇನಾಗಿದ್ದೇವೆ ಎನ್ನುವುದು ತಿಳಿಯುತ್ತದೆ ಎಂದರು. ಜ್ಞಾನದ ಬಾಗಿಲನ್ನು ತೆರೆಯುವ, ಅಂತರಾತ್ಮದ ಜಾಗೃತಿ ಮೂಡಿಸುವ
ಮಾನಸಿಕ ನೆಮ್ಮದಿ ಮನಸ್ಸು ಶುದ್ದ ಇದ್ದರೆ ಮಾತ್ರ ದೊರೆಯುತ್ತದೆ. ನಮ್ಮಲ್ಲಿರುವ ವಿಸ್ಮಯ ಗುಣಗಳನ್ನು ದೂರ ಮಾಡಿ ಚಾರಿತ್ರ್ಯ ನಿರ್ಮಾಣ ಮಾಡಲು ಈ ಸ್ಥಳ ಸ್ಥಾಪನೆಯಾಗಿದೆ.
ಕರ್ನಾಟಕ ನೀಡಿರುವ ಜಾಗತಿಕ ಗುರು- ಸದ್ಗುರು:
ಸದ್ಗುರುಗಳು ಕನ್ನಡದವರು. ಕರ್ನಾಟಕ ನೀಡಿರುವ ಜಾಗತಿಕ ಗುರು- ಸದ್ಗುರುಗಳು. ಅವರ ತಾಯಿ ಊರು ಚಿಕ್ಕಬಳ್ಳಾಪುರ. ಖಂಡಿತವಾಗಿಯೂ ಈ ಕೇಂದ್ರ ಅಂತರರಾಷ್ಟ್ರೀಯ ಕೇಂದ್ರವಾಗಲಿದೆ ಎಂದರು.
https://pragati.taskdun.com/latest/free-eye-checkup-camp-niyathi-foundationbelagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ