Kannada NewsLatest

ನಾಗನಗೌಡ ಬೆಳ್ಳುಳ್ಳಿಯವರಿಗೆ ‘ಬುದ್ಧ ಬೀಮ ಪ್ರಶಸ್ತಿ’

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಂಬೇಡ್ಕರ್ ದಲಿತ ಸೇನೆ(ರಿ.) ಶುಭೋದಯ ಚಾರಿಟೇಬಲ್ ಟ್ರಸ್ಟ್ (ರಿ‌.) ಸಂಯುಕ್ತಾಶ್ರಯದಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಅಂದರ ಜೀವ ಬೆಳಕು ಸಂಸ್ಥೆ ಸಂಸ್ಥಾಪಕರಾದ ನಾಗನಗೌಡ ಬೆಳ್ಳುಳ್ಳಿ ಅವರ ಸಮಾಜ ಸೇವೆಯನ್ನು ಗುರುತಿಸಿ “ಬುದ್ದ ಬೀಮ ಪ್ರಶಸ್ತಿ” ಯನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಾಗನಗೌಡ ಬೆಳ್ಳುಳ್ಳಿ ಅವರು ಈ ಪ್ರೀತಿ ಪುರಸ್ಕಾರ ನನ್ನ ಗುರುಹಿರಿಯರ ಆಶೀರ್ವಾದ ಹಾಗೂ ನನ್ನ ಪ್ರಭಾರಿ ಸಂಸ್ಥೆಯ ಉಳಿವಿಗಾಗಿ ಮತ್ತು ಉನ್ನತ ಮಟ್ಟದ ಬೆಳವಣಿಗೆಗಾಗಿ ಹಗಲಿರುಳು ಶ್ರಮಿಸಿ ದಂತಹ ನನ್ನ ಎಲ್ಲಾ ಸ್ನೇಹಿತರಿಗೂ/ಒಡನಾಡಿಗಳಿಗೆ ನಾನು ಯಾವಾಗಲೂ ಆಭಾರಿಯಾಗಿದ್ದೇನೆ, ರಾಜ್ಯದ ಮಹಾಜನತೆಯು ನನ್ನ ಕಷ್ಟ ಸಂದರ್ಭದಲ್ಲಿ ಪರಿಪಾಲಿಸಿ ನನ್ನನ್ನು ಬೆಳೆಸಲು ಪ್ರಯತ್ನಿಸಿದ್ದಾರೆ ತಮ್ಮೆಲ್ಲರಿಗೂ ನಾನು ಪ್ರೀತಿಪೂರ್ವಕವಾಗಿ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.

ಪೀಠಾಧ್ಯಕ್ಷರು ಉರಿಲಿಂಗ ಪೆದ್ದಿ ಮಹಾಸಂಸ್ಥಾನ ಶಾಖಾ ಮಠ. ಮೈಸೂರು ಪರಮಪೂಜ್ಯ ಶ್ರೀ ಜ್ಞಾನಪ್ರಕಾಶ ಮಹಾಸ್ವಾಮೀಜಿ ಸಮಾರಂಭ ಉದ್ಘಾಟಿಸಿದರು.
ಚಲವಾದಿ ಗುರುಪೀಠ. ಚಿತ್ರದುರ್ಗ ಪರಮಪೂಜ್ಯ ಶ್ರೀ ಚಲವಾದಿ ಬಸವ ನಾಗಿದೇವ ಶರಣರು, ಬಂಜಾರ ಗುರುಪೀಠ. ಚಿತ್ರದುರ್ಗ ಪರಮಪೂ ಜ್ಯ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮಿಗಳು, ಸರ್ವಧರ್ಮ ಸಮನ್ವಯ ಪೀಠ. ಧಾರವಾಡ ಪರಮಪೂಜ್ಯ ಶ್ರೀ ಸಂಗಮ ಆನಂದ ಸ್ವಾಮಿಗಳು ದಿವ್ಯ ಸಾನ್ನಿಧ್ಯವಹಿಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಪರಮಪೂಜ್ಯ ಶ್ರೀ ಸಂಗಮ ಆನಂದ ಸ್ವಾಮಿಗಳು, ಸರ್ವಧರ್ಮ ಸಮನ್ವಯ ಪೀಠ ಧಾರವಾಡ, ಇವರು ಕಾರ್ಯಕ್ರಮದ ಕುರಿತು ಬಹು ಸಂತೋಷವನ್ನು ವ್ಯಕ್ತಪಡಿಸಿದರು, ಇಂದಿನ ಪ್ರಶಸ್ತಿ ಸಮಾರಂಭ ಬರೀ ಪ್ರಶಸ್ತಿ ಸಮಾರಂಭ ಅಲ್ಲದೇ ಇದು ಒಂದು ಅಂದರ ಜೀವನದಲ್ಲಿ ಸದಾ ಜ್ಯೋತಿಯಂತೆ ಉಜ್ವಲಿಸಬೇಕು ಎಂದರು, ಅಂಧರ ಜೀವನದಲ್ಲಿ ಹೀಗೆ ಸದಾ ಬೆಳಕನ್ನು ಚೆಲ್ಲುತ್ತಿರ ಬೇಕು ಹಾಗೂ ಅವರಿಗೂ ಎಲ್ಲರಂತೆ ಸಮಾಜದಲ್ಲಿ ಒಳ್ಳೆಯ ಅವಕಾಶಗಳನ್ನು ಕಲ್ಪಿಸಿಕೊಡಬೇಕು ಅಂಧತ್ವವನ್ನು ಮರೆತು ಇತರರ ಅಂದರ ಬಾಳಿನಲ್ಲಿ ಭರವಸೆಯ ಬೆಳಕನ್ನು ಮೂಡಿಸುತ್ತಿರುವ ನಾಗನಗೌಡ ಬೆಳ್ಳುಳ್ಳಿ ಅವರ ಸಮಾಜಮುಖಿ ಕೆಲಸವನ್ನು ನೋಡಿ ನನಗೆ ಬಹಳ ಸಂತೋಷವಾಯಿತು ಭಗವಂತನ ಅನುಗ್ರಹ ಅವರಿಗೆ ಸದಾ ಇರುತ್ತದೆ ದೇವರ ಆಶೀರ್ವಾದ ಇಲ್ಲದೆ ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ ಹಾಗೆಯೇ ಭಗವಂತನ ಆಶೀರ್ವಾದ ನಾಗನಗೌಡ ಅವರ ಮೇಲೆ ಸದಾ ಇರುತ್ತದೆ ಎಂದು ಮೆಚ್ಚುಗೆ ಸಂತೋಷ ವ್ಯಕ್ತಪಡಿಸುವುದರ ಮುಖಾಂತರ ಆಶೀರ್ವಚನ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button