Karnataka NewsPolitics

*ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಲಪಾಡ್‌ ಬ್ರಿಗೇಡ್‌ ಅಧ್ಯಕ್ಷೆ*

ಪ್ರಗತಿವಾಹಿನಿ ಸುದ್ದಿ: ಕಲಬುರಗಿಯ ಸಿಸಿಬಿ ಪೊಲೀಸರು ನಲಪಾಡ್‌ ಬ್ರಿಗೇಡ್‌ ಅಧ್ಯಕ್ಷೆ ಮಂಜುಳಾಳನ್ನು ಹನಿಟ್ರ್ಯಾಪ್ ಆರೋಪದ ಮೇಲೆ ಬಂಧಿಸಿದ್ದಾರೆ.

ಮಾಜಿ ಸಚಿವರಿಗೆ ಹನಿಟ್ರಾಪ್ ಮಾಡಿದ ಆರೋಪದಲ್ಲಿ ನಲಪಾಡ್ ಬ್ರಿಗೇಡ್‌ ಆಧ್ಯಕ್ಷೆಯನ್ನು ಕಲಬುರಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Home add -Advt

ಈಕೆ ಮೊದಲಿಗೆ ವಾಟ್ಸ್ ಆಪ್ ನಲ್ಲಿ ಸೆಕ್ಸ್ ಚಾಟ್ ಆರಂಭ ಮಾಡಿ ಸಲುಗೆ ಬೆಳೆಸಿಕೊಂಡು ನಂತರ ವಿಡಿಯೋ ಕಾಲ್ ಮಾಡಲು ಆರಂಭಿಸಿದ್ದಳಂತೆ. ಈ ವೇಳೆ ಖಾಸಗಿ ಕ್ಷಣಗಳನ್ನ ವಿಡಿಯೋ ಚಿತ್ರಿಕರಿಸಿಕೊಂಡು ಬ್ಲಾಕ್ ಮೇಲ್ ಮಾಡಲು ಆರಂಭಿಸಿ ನನ್ನ ಬಳಿ ನಿಮ್ಮ ವಿಡಿಯೋ ಇದೆ. 20 ಲಕ್ಷ ಕೊಡದಿದ್ರೆ ವಿಡಿಯೋ ವೈರಲ್ ಮಾಡೋದಾಗಿ ಬ್ಲಾಕ್ ಮೇಲ್ ಮಾಡಿದ್ದಾಳೆ ಎಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ ಪುತ್ರ ರಿತೇಶ ಗುತ್ತೆದಾರ ಸಿಸಿಬಿಗೆ ದೂರು ನೀಡಿದ್ದಾರೆ. ನಂತರ 20 ಲಕ್ಷ ನೀಡುವುದಾಗಿ ಈಕೆಯನ್ನು ಕರೆಸಿ, ಪಡೆಯಲು ಬೆಂಗಳೂರಿಗೆ ಬಂದಾಗ ಮಂಜುಳಾರನ್ನು ಸಿಸಿಬಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿದ್ದಾರೆ.

Related Articles

Back to top button