Kannada NewsKarnataka NewsLatest

ಬೆಳಗಾವಿ: KLS GITಯ ನಳಿನ್ ಪಾಟೀಲ್ ಗೆ ಎನ್ ಎಸ್ ಎಸ್ ಅತ್ಯುತ್ತಮ ಸ್ವಯಂಸೇವಕ ರಾಜ್ಯ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಎಸ್ ಜಿಐಟಿಯ ನಳಿನ್ ಪಾಟೀಲ್ ಅವರಿಗೆ ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ  2020-21 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಕೋಶದಿಂದ ಅತ್ಯುತ್ತಮ  ಸ್ವಯಂಸೇವಕ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ರಾಷ್ಟ್ರೀಯ ಸೇವಾ ಯೋಜನೆ ಮುಖಾಂತರ ಅವರು ಸಲ್ಲಿಸಿರುವ ಸೇವೆಗಳನ್ನು ಗಮನಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Home add -Advt

ನಳಿನ್ ಪಾಟೀಲ್ಅವರು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ 2019ರಲ್ಲಿ ನವದೆಹಲಿಯಲ್ಲಿ ಆಯೋಜಿಸಿದ ಎನ್ಎಸ್ಎಸ್ ರಾಷ್ಟ್ರೀಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.  ಚೀನಾದ ವಾಣಿಜ್ಯೋದ್ಯಮ ವೇದಿಕೆ, ಶಾಂಘೈ ಸಹಕಾರ ಸಂಸ್ಥೆ 2021ರಲ್ಲಿ ಯುವಜನತೆಗಾಗಿ ಏರ್ಪಡಿಸಿದ್ದ ಸಮಾವೇಶದಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು. 

ನಳಿನ್ ಪಾಟೀಲ್ ಅವರ ಸಾಧನೆಗೆ ಕೆಎಲ್ಎಸ್ ಆಡಳಿತ ಮಂಡಳಿ ಸದಸ್ಯರು, ಜಿಐಟಿ ಪ್ರಾಂಶುಪಾಲ ಡಾ. ಜಯಂತ ಕೆ. ಕಿತ್ತೂರು, ಡೀನ್ ಎಡ್ಮಿನ್ ಪ್ರೊ.ಡಿ.ಎ.ಕುಲಕರ್ಣಿ, ಜಿಐಟಿ ರಿಜಿಸ್ಟ್ರಾರ್ ಪ್ರೊ.ಕಿರಣ  ಥಬಾಜ್, ಎನ್ ಎಸ್ ಎಸ್  ಸಂಯೋಜಕ ಪ್ರೊ. ವಿ.ವಿ.ರಜಪೂತ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದರು.

ಆಸ್ಪತ್ರೆಗಳ ಭದ್ರತಾ ಲೋಪ : ಜಿಲ್ಲಾಡಳಿತದ ಗಮನ ಸೆಳೆದ ಬೆಳಗಾವಿ ಎಸ್ಪಿ

Related Articles

Back to top button