Latest

ಪಿಎಂ ಕೇರ್ಸ್ ಫಂಡ್ ಗೆ ರತನ್ ಟಾಟಾ ಟ್ರಸ್ಟಿ, ಕನ್ನಡತಿ ಸುಧಾ ಮೂರ್ತಿ ಸಲಹಾ ಸಮಿತಿಗೆ ನೇಮಕ

ಪ್ರಗತಿ ವಾಹಿನಿ, ನವದೆಹಲಿ: ಟಾಟಾ ಸನ್ಸ್ ನ ಚೇರ್ಮನ್ ಖ್ಯಾತ ಉದ್ಯಮಿ ರತನ್ ಟಾಟಾ ಅವರನ್ನು ಪ್ರಧಾನಮಂತ್ರಿ ಸುರಕ್ಷಾ ನಿಧಿ ಸಮಿತಿಯ ಟ್ರಸ್ಟಿ ಆಗಿ ಕೇಂದ್ರ ಸರಕಾರ ನೇಮಕ ಮಾಡಿದೆ.

ಅದರಂತೆ, ಸುಪ್ರಿಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಕೆ. ಟಿ. ಥಾಮಸ್, ಲೋಕಸಭೆಯ ಮಾಜಿ ಉಪ ಸಭಾಪತಿ ಕರಿಯಾ ಮುಂಡಾ ಅವರು ಸಹ ಟ್ರಸ್ಟಿಗಳಾಗಿ ನೇಮಕಗೊಂಡಿದ್ದಾರೆ.

Home add -Advt

ಇನ್ನು ಪಿಎಂ ಕೇರ್ಸ್ ನ ಸಲಹಾ ಸಮಿತಿಗೆ ಇನ್ಫೋಸಿಸ್ ನ ಸುಧಾ ಮೂರ್ತಿ ಅವರನ್ನು ನೇಮಕ ಮಾಡಲಾಗಿದೆ.
ಮಂಗಳವಾರ ಪಿಎಂ ಕೇರ್ಸ್ ಟ್ರಸ್ಟಿಗಳ ನೇಮಕಾತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗ್ರಹ ಸಚಿವ ಅಮಿತ್ ಶಾ ಮೊದಲಾಗಿ ಹಿರಿಯ ಸಚಿವರ ಉಪಸ್ಥಿತಿಯಲ್ಲಿ ಸಭೆ ನಡೆದಿತ್ತು. ಮಾರನೇಯ ದಿನವಾದ ಬುಧವಾರವೇ ಟ್ರಸ್ಟಿಗಳ ನೇಮಕವಾಗಿದೆ.

ಬೆಳಗಾವಿ: KLS GITಯ ನಳಿನ್ ಪಾಟೀಲ್ ಗೆ ಎನ್ ಎಸ್ ಎಸ್ ಅತ್ಯುತ್ತಮ ಸ್ವಯಂಸೇವಕ ರಾಜ್ಯ ಪ್ರಶಸ್ತಿ

Related Articles

Back to top button