Latest

ನಮಿಬಿಯಾದಿಂದ ಭಾರತಕ್ಕೆ ಬಂದ ಚೀತಾಗಳ ಹೆಸರೇನು ಗೊತ್ತಾ?

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ನಮಿಬಿಯಾದಿಂದ ಭಾರತಕ್ಕೆ ಶನಿವಾರ  ತರಲಾದ ಎಂಟು ಚೀತಾಗಳಿಗೂ ನಾಮಕರಣವಾಗಿದೆ.

ಮೂರು ಗಂಡು, ಐದು ಹೆಣ್ಣು ಚಿರತೆಗಳಿದ್ದು ಈ ಪೈಕಿ ಗಂಡು ಚಿರತೆಗಳಿಗೆ ಫ್ರೆಡ್ಡಿ, ಎಲ್ಟನ್ ಮತ್ತು ಓಬಾನ್ ಎಂದು ಹೆಸರಿಡಲಾಗಿದೆ. ಇನ್ನು ಹೆಣ್ಣು ಚಿರತೆಗಳಿಗೆ ಸಿಯಾಯಾ, ಆಶಾ, ಟೆಬಿಲಿಸಿ, ಸಾಶಾ, ಸವನ್ನಾ ಎಂಬ ಹೆಸರಿಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಚಿರತೆಗಳನ್ನು ಶನಿವಾರವಷ್ಟೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬಿಡುಗಡೆ ಮಾಡಿದ್ದಾರೆ.

ಈ ಪೈಕಿ 4 ವರ್ಷದ ‘ಆಶಾ’ ಎಂಬ ಹೆಣ್ಣು ಚೀತಾಕ್ಕೆ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮ ದಿನದ ಸಂದರ್ಭದಲ್ಲಿ ಅಪ್ಪಟ ಭಾರತೀಯ ನಾಮಕರಣ ಮಾಡಿದ್ದಾರೆ. ಈ ಚೀತಾಕ್ಕೆ ಭಾರತಕ್ಕೆ ತರುವ ಮೊದಲು ಹೆಸರಿರಲಿಲ್ಲ ಎನ್ನಲಾಗಿದೆ.

ಭಾರತದಲ್ಲಿ 70ರ ದಶಕದಲ್ಲಿ ಚೀತಾಗಳ ಸಂತತಿ ಸಂಪೂರ್ಣ ಅಳಿದುಹೋಗಿದ್ದ  ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ನಮಿಬಿಯಾದಿಂದ ಚೀತಾಗಳನ್ನು ಭಾರತಕ್ಕೆ ತರುವ ಯೋಜನೆ ಹಮ್ಮಿಕೊಂಡಿತ್ತು.

ಆಯ್ಕೆಯಾದ ತಂಡ ಟೀಕಿಸಬೇಡಿ ಎಂದ ಸುನೀಲ್ ಗಾವಸ್ಕರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button