
ನಾಳೆಯಿಂದಲೇ ಟಿಕೆಟ್ ದರ ಭಾರಿ ಏರಿಕೆ
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿಗರ ಜೀವನಾಡಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂ ಆರ್ ಸಿ ಎಲ್ ದಿಢೀರ್ ಶಾಕ್ ನೀಡಿದೆ. ನಾಳೆಯಿಂದಲೇ ಮೆಟ್ರೋ ಟಿಕೆಟ್ ದರ ಹೆಚ್ಚಳವಾಗಲಿದೆ ಎಂದು ಅಧಿಕೃತ ಆದೇಶ ಹೊರಡಿಸಿದೆ.
ಈ ವರ್ಷ ನಮ್ಮ ಮೆಟ್ರೋ ಪ್ರಯಾಣದ ರ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ ಎಂದು ಹೇಳಲಾಗಿತ್ತು. ಇದರಿಂದ ಮೆಟ್ರೋ ಪ್ರಯಾಣಿಕರು ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಇದೀಗ ಏಕಾಏಕಿ ನಮ್ಮ ಮೆಟ್ರೋ ಪ್ರಯಾಣದರವನ್ನು ಹೆಚ್ಚಳ ಮಾಡಿ ಬಿಎಂ ಆರ್ ಸಿ ಎಲ್ ಆದೇಶ ಹೊರಡಿಸಿದೆ.
ಈಗಾಗಲೇ ಬಸ್ ಪ್ರಯಾಣದರವನ್ನು ಏರಿಕೆ ಮಾಡಿರುವ ಸರ್ಕಾರ ಶೀಘ್ರದಲ್ಲಿಯೇ ನೀರಿನ ದರವನ್ನು ಹೆಚ್ಚಳ ಮಾಡುವ ಬಗ್ಗೆ ಸುಳಿವು ನೀಡಿದೆ. ಇದರ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಹೆಚ್ಚಳವಾಗಿದ್ದು, ಬೆಂಗಳೂರಿಗರಿಗೆ ಮೇಲಿಂದ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಮೆಟ್ರೋ ದರ ಹೆಚ್ಚಳದ ವಿವರ ಈ ಕೆಳಗಿನಂತಿದೆ:
0-2 ಕಿ.ಮೀ ಪ್ರಯಾಣಕ್ಕೆ 10 ರೂಪಾಯಿ ಟಿಕೆಟ್ ದರ ಹೆಚ್ಚಲವಾಗಿದೆ.
2-4 ಕಿ.ಮೀ ಪ್ರಯಾಣಕ್ಕೆ 20 ರೂಪಾಯಿ ಹೆಚ್ಚಳ
4-6 ಕಿ.ಮೀ ಪ್ರಯಾಣಕ್ಕೆ 30 ರೂಪಾಯಿ ಹೆಚ್ಚಳ
6-8 ಕಿ.ಮೀ ಪ್ರಯಾಣಕ್ಕೆ 40 ರೂಪಾಯಿ ಹೆಚ್ಚಳ
8-10 ಕಿ.ಮೀ ಪ್ರಯಾಣಕ್ಕೆ 50 ರೂಪಾಯಿ ಹೆಚ್ಚಳ
10-15ಕಿ.ಮೀ ಪ್ರಯಾಣಕ್ಕೆ 60 ರೂಪಾಯಿ ಹೆಚ್ಚಳ
15-20 ಕಿ.ಮೀ ಪ್ರಯಾಣಕ್ಕೆ 70 ರೂಪಾಯಿ ಹೆಚ್ಚಳ
20-25 ಕೀ.ಮೀ ಪ್ರಯಾಣಕ್ಕೆ 80 ರೂಪಾಯಿ ಹೆಚ್ಚಳ
30 ಕಿ.ಮೀ ಗಿಂತ ಹೆಚ್ಚಿನ ಪ್ರಯಾಣಕ್ಕೆ 90 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಇನ್ನು ಸ್ಮಾರ್ಟ್ ಕಾರ್ಡ್ ಮೇಲಿನ ದರವನ್ನು 40 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇನ್ಮುಂದೆ ಸ್ಮಾರ್ಟ್ ಕಾರ್ಡ್ ನಲ್ಲಿ ಮಿನಿಮಮ್ 90 ರೂಪಾಯಿ ಇರಲೇಬೇಕು.