ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬಹುದಿನಗಳಿಂದ ಚರ್ಚಿತವಾಗಿದ್ದ ಹಾಲಿನ ದರ ಏರಿಕೆಗೆ ಅಂತೂ ಮುಹೂರ್ತ ಕೂಡಿ ಬಂದಿದೆ. ಗುರುವಾರದಿಂದ ಹಾಲು ಹಾಗೂ ಮೊಸರಿನ ದರ ಪ್ರತಿ ಲೀಟರ್ ಗೆ 2 ರೂ. ಹೆಚ್ಚಳವಾಗಲಿದೆ.
ಕೆಎಂಎಫ್ ಚೇರಮನ್ ಬಾಲಚಂದ್ರ ಜಾರಕಿಹೊಳಿ ಈ ಕುರಿತು ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ ನಂತರ ಅಂತಿಮ ನಿರ್ಧಾರಕ್ಕೆ ಬರಲಾಗಿದೆ. 2 ರೂ. ಹೆಚ್ಚಳವನ್ನು ಸಂಪೂರ್ಣ ರೈತರಿಗೆ ವರ್ಗಾಯಿಸಲಾಗುವುದು. ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಕೆಎಂಎಫ್ ಬರಲಿದೆ ಎಂದು ಅವರು ತಿಳಿಸಿದರು.
ಪ್ರತಿ ದಿನ 77 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದ್ದು, 50 ಲಕ್ಷ ಲೀಟರ್ ನಿತ್ಯ ಮಾರಾಟವಾಗುತ್ತಿದೆ. ಇನ್ನುಳಿದ 27 ಲಕ್ಷ ಲೀಟರ್ ಹಾಲಿನಿಂದ ಬೇರೆ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಅವುಗಳಿಂದ ಬಂದ ಲಾಭವನ್ನೂ ರೈತರಿಗೆ ವರ್ಗಾಯಿಸಲು ಯೋಚಿಸಲಾಗುತ್ತಿದೆ ಎಂದೂ ಜಾರಕಿಹೊಳಿ ತಿಳಿಸಿದರು.
Breaking News- ಹಾಲಿನ ದರ 3 ರೂ. ಹೆಚ್ಚಳಕ್ಕೆ ಸಿಎಂ ಅಸಮ್ಮತಿ
https://pragati.taskdun.com/breaking-news-milk-price-cm-disapproves-for-increase-3-rs/
Big Breaking – ಹಾಲಿನ ದರ ಏರಿಕೆಗೆ ಮುಖ್ಯಮಂತ್ರಿ ಬ್ರೇಕ್ ; 20ರ ವರೆಗೆ ತಡೆ ಎಂದ ಬಾಲಚಂದ್ರ ಜಾರಕಿಹೊಳಿ
https://pragati.taskdun.com/milk-price-revision-conclusion-after-nov-20/
ದುಂದುವೆಚ್ಚಕ್ಕೆ ಕಡಿವಾಣ: ರೈತರಿಗೆ ಅನ್ಯಾಯವಾಗದಂತೆ, ಗ್ರಾಹಕರಿಗೆ ಹೊರೆಯಾಗದಂತೆ ಹಾಲಿನ ದರ ನಿಗದಿ
https://pragati.taskdun.com/kmfmilk-price-hikecm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ