ರಾಣಿ ಚೆನ್ನಮ್ಮ ಮಹಿಳಾ ಬ್ಯಾಂಕ್‌ಗೆ ರಾಷ್ಟ್ರಮಟ್ಟದ ಪ್ರಶಸ್ತಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪುಣೆಯಲ್ಲಿ ಜರುಗಿದ ಸಮಾರಂಭದಲ್ಲಿ ಬೆಳಗಾವಿಯ ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್‌ಗೆ ೮ನೇ ಆಲ್ ಇಂಡಿಯಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿಂಗ್ ಅವಾರ್ಡ್ -೨೦೨೪ ಬೆಸ್ಟ್ ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದೆ.
ಕಳೆದ ಇಪ್ಪತ್ತೇಳು ವರ್ಷಗಳಿಂದ ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುತ್ತಾ ಬಂದಿದೆ. ಮಹಿಳಾ ಬ್ಯಾಂಕ್‌ನ ವಿಶ್ವಾರ್ಹತೆ ಹಾಗೂ ರಚನಾತ್ಮಕವಾದ ಕೆಲಸಗಳನ್ನು ಅವಲೋಕಿಸಿ ಈ ಪ್ರಶಸ್ತಿಯನ್ನು ಅರ್ಪಿಸಿದೆ.
೮ ಮೇ ೨೦೨೪ ರಂದು ಪುಣೆಯಲ್ಲಿ ಜರುಗಿದ ಅದ್ದೂರಿ ಸಮಾರಂಭದಲ್ಲಿ ಅಂಬ್ರೇಲಾ ಅರ್ಗನೈಜೇಶನ್ ಚೇರಮನ್ ಮತ್ತು ಎನ್‌ಎಎಫ್‌ಸಿಯುಬಿ ಡೈರೆಕ್ಟರ್ ಜ್ಯೋತೀಂದ್ರ ಮೆಹತಾ ಮತ್ತು ಕ್ರೈಸ್ಟ್ ಇನ್ಫೋಮಿಡಿಯಾ ಸಂಸ್ಥಾಪಕರು ಹಾಗೂ ಸಿಇಓ ಗೌತಮ ನವೀನ ಅವರು ರಾಣಿ ಚನ್ನಮ್ಮ ಮಹಿಳಾ ಬ್ಯಾಂಕಿನ ಅಧ್ಯಕ್ಷೆ ಡಾ.ಪ್ರೀತಿ ದೊಡವಾಡ ಅವರಿಗೆ ಪ್ರಶಸ್ತಿಯನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ್ ಉಪಾಧ್ಯಕ್ಷೆ ರೂಪಾ ಮುನವಳ್ಳಿ, ನಿರ್ದೇಶಕರಾದ ಆಶಾ ಪ್ರಭಾಕರ ಕೋರೆ, ಕೀರ್ತಿ ಮೆಟಗುಡ್ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಮಹಿಳಾ ಬ್ಯಾಂಕಿಗೆ ಬಂದಿರುವ ರಾಷ್ಟ್ರಮಟ್ಟದ ಪ್ರಶಸ್ತಿಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹರ್ಷವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ