Belagavi NewsBelgaum NewsKannada NewsKarnataka NewsLatest

*ಮೈ ನವಿರೇಳಿಸಿದ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆ*

ಕ್ರೀಡಾ ಕ್ಷೇತ್ರದಲ್ಲಿ ಯುವಕರು ಸಾಧನೆ ಮಾಡಲಿ: ರಾಹುಲ್‌ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಸಿಪಿಎಸ್‌ ಮೈದಾನದಲ್ಲಿ ಜರುಗಿದ 11ನೇ ಸತೀಶ ಶುಗರ್ಸ ಕ್ಲಾಸಿಕ್ ರಾಜ್ಯ ಹಾಗೂ ರಾಷ್ಟ್ರಮಟ್ಟದ ದೇಹದಾರ್ಡ್ಯ ಸ್ಪರ್ಧೆ ನೆರೆದಿದ್ದ ಪ್ರೇಕ್ಷಕರ ಮೈ ನವಿರೇಳಿಸುವಂತಿತ್ತು. ದೇಹದಾಡ್ಯ ಸ್ಪರ್ಧೆಗಳು ವಿಭಿನ್ನ ಬಂಗಿಯಲ್ಲಿ ತಮ್ಮ ದೇಹದಾಡ್ಯವನ್ನು ತೋರಿಸಿದ್ದು, ದೇಹದಾಡ್ಯ ಸ್ಪರ್ಧೆ ನೋಡಿದ ಜನ ಹಾಗೂ ಅಭಿಮಾನಿಗಳು ಕೇಕೆ, ಶಿಳ್ಳೆ ಹೊಡೆದು ಖುಷಿಪಟ್ಟರು. ಮೈದಾನದಲ್ಲಿದ್ದ ಜನ ಕ್ರೀಡಾಪಟುಗಳನ್ನು ಹುರುದುಂಬಿಸಿ ಸ್ಪರ್ಧೆಗೆ ಇನ್ನಷ್ಟು ಮೆರಗು ತಂದರು.

ರಾಷ್ಟ್ರಮಟ್ಟದ ದೇಹದಾರ್ಡ್ಯ ಸ್ಪರ್ಧೆ ಸಮಾರಂಭದಲ್ಲಿ ಭಾವಗವಹಿಸಿ ಮಾತನಾಡಿದ ಯುವ ನಾಯಕ ರಾಹುಲ್ ಜಾರಕಿಹೊಳಿ, ಕ್ರೀಡಾ ಕ್ಷೇತ್ರದಲ್ಲಿ ಯುವಕರು ಸಾಧನೆ ಮಾಡಬೆಕೆಂಬ ಉದೇಶದಿಂದ ಪ್ರತಿ ಭಾರೀ ಸತೀಶ ಜಾರಕಿಹೊಳಿ ಫೌಂಡೇಶನ ಹಾಗೂ ರೋಟರ್‌ ಕ್ಲಬ್‌ ವತಿಯಿಂದ ಸತೀಶ ಶುಗರ್ಸ ಕ್ಲಾಸಿಕ್ ರಾಷ್ಟ್ರಮಟ್ಟದ ದೇಹದಾರ್ಡ್ಯ ಸ್ಪರ್ಧೆ ಏರ್ಪಡಿಸಲಾಗುತ್ತಿದೆ ಎಂದು ಹೇಳಿದರು.

ಕ್ರೀಡಾಪಟುಗಳಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ಇರದೇ ಇರುವ ಹಿನ್ನೆಲೆಯಲ್ಲಿ ಕ್ರೀಡಾ ಕ್ಷೇತ್ರದಲ್ಲಿ ನಮ್ಮ ದೇಶ ಸಾಕಷ್ಟು ಹಿಂದೆ ಉಳಿದಿದೆ. ಹಾಗಾಗಿ ತಾವು ಈ ಕೊರತೆಯನ್ನು ನೀಗಿಸಲು ಕಳೆದ ವರ್ಷಗಳಿಂದ ಸತೀಶ ಜಾರಕಿಹೊಳಿ ಫೌಂಡೇಶನ ವತಿಯಿಂದ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸಿ ಯುವಕರಿಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡಿ ಉತ್ತೇಜಿಸುತ್ತಿದ್ದೇವೆ. ಇದು ನಿರಂತರವಾಗಿ ನಡೆಯಲಿದೆ ಎಂದರು.

ಮುಂಬರುವ ದಿನಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಬೆಳಗಾವಿ ಜಿಲ್ಲೆಯನ್ನು ಜಗತ್ತಿನ ಭೂಪುಟದಲ್ಲಿ ಗುರುತಿಸುವುದರ ಜೊತೆಗೆ ನಮ್ಮ ಜಿಲ್ಲೆಯ ದೇಹದಾರ್ಢ್ಯ ಪಟುಗಳನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ದಢ ಸಂಕಲ್ಪ ನಮ್ಮದಾಗಿದೆ ಎಂದು ಅವರು, ಇಂದು ಬಹುತೇಕರು ದುಶ್ಚಟಕ್ಕೆ ಬಲಿಯಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಒಮ್ಮೆ ದೇಹ ಕೆಟ್ಟರೆ ಅದನ್ನು ಮೊದಲಿನ ಸ್ಥಿತಿಗೆ ತರಲು ಸಾಧ್ಯವಿಲ್ಲ. ಉತ್ತಮ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೆಕು. ದೈಹಿಕವಾಗಿ ಚೆನ್ನಾಗಿದ್ದರೆ ಮಾತ್ರ ಮಾನಸಿಕವಾಗಿ ಸದೃಢರಾಗಿರಬಹುದು. ಯುವಕರು ಸಾಧನೆಗೆ ಹೆಚ್ಚು ಒತ್ತು ಕೊಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಗಣ್ಯರು ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಅಂಪೈರ್ ಳಿಗೆ ಯುವ ನಾಯಕ ರಾಹುಲ್‌ ಜಾರಕಿಹೊಳಿ ಸನ್ಮಾನಿಸಿದರು.
ಈ ವೇಳೆ ಶಾಸಕ ರಾಜು ಸೇಠ್, ಸಿರಿಶ್ ಗೋಘಾಟೆ, ಅವಿನಾಶ್ ಪೊದ್ದಾರ್, ಅಜಿತ್ ಸಿದ್ದಣ್ಣನವರ್, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, ಡಾ. ರವಿ ಪಾಟೀಲ, ಚೇತನ್ ಪತಾರೆ, ತುಳಸಿ ಸುಝೈನ್, ಪ್ರೇಮಚಂದ್ ಡಿಗ್ರಾ, ಟಿ.ವಿ.ಪೋಲಿ, ರಿಯಾ ಚೌಗಲಾ, ಮನೋಜ್ ಮೈಚೆಲ್ ಜೈದೀಪ್ ಸಿದ್ದಣ್ಣನವರ್, ಸಂತೋಷ ಪಾಟೀಲ ಡಾ. ಹಿರಾಲ್ ಸೇಠ್, ರವಿ ಉಳ್ಳಾಗಡ್ಡಿ ಸೇರಿದಂತೆ ಅನೇಕ ಮುಖಂಡರು ಇದ್ದರು.

Related Articles

Back to top button