Latest

ರಾಷ್ಟ್ರೀಯ ಹೆದ್ದಾರಿ  ಸಂಪೂರ್ಣ ಜಲಾವೃತ;  ಬೆಂಗಳೂರು-ಪುಣೆ ಮಾರ್ಗ ಸ್ಥಗಿತ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಾದ್ಯಂತ ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ಸಂಪರ್ಕವೇ ಕಡಿತಗೊಂಡಿದೆ. ತುಮಕೂರು ಬಳಿ ರಾಷ್ಟ್ರೀಯ ಹೆದ್ದಾರಿ ನದಿಯಂತಾಗಿದ್ದು, ಬೆಂಗಳೂರು-ಪುಣೆ ಮಾರ್ಗ ಬಂದ್ ಆಗಿದೆ.

ತುಮಕೂರಿನ ಹೆಬ್ಬಾಕ ಕೆರೆ ಕೋಡಿ ಒಡೆದು ರಾಷ್ಟ್ರೀಯ ಹೆದ್ದಾರಿ 48 ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆಯ ಮೇಲೆ ನೀರು ಹರಿಯುತ್ತಿರುವುದರಿಂದ  ತುಮಕೂರು-ಬೆಂಗಳೂರು ಮಾರ್ಗದಲ್ಲಿ 10 ಕೀ.ಮೀ ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿವೆ. ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಹೆದ್ದಾರಿ ಮಾರ್ಗ ಬೆಂಗಳೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಬಹುತೇಕ ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ.

ಬೆಳಗಾವಿ-ಪುಣೆ ಮಾರ್ಗವಾಗಿ ಉತ್ತರ ಭಾರತದೆಡೆಗೆ ತೆರಳುವ ವಾಹನಗಳು ಕೂಡ ಇದೇ ಮಾರ್ಗವನ್ನು ಅನುಸರಿಸುತ್ತವೆ. ಇದೀಗ ಈ ಮಾರ್ಗ ಜಲಾವೃತಗೊಂಡು ಟ್ರಾಫಿಕ್ ಜಾಮ್ ಸಂಭವಿಸಿದ್ದು, ಸಂಚಾರವೇ ಸ್ಥಗಿತಗೊಂಡಿದೆ.

ಭಾರಿ ಮಳೆಗೆ ಕುಸಿದ ಮೆಟ್ರೋ ತಡೆಗೋಡೆ; 7 ಕಾರು, 2 ಬೈಕ್ ಜಖಂ

https://pragati.taskdun.com/latest/bangaloreheavy-rainflood-2/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button