Belagavi NewsBelgaum NewsKannada NewsKarnataka NewsNational
*ರಾಷ್ಟ್ರಮಟ್ಟದ ಮಧ್ಯಸ್ಥಿಕೆ ಅಭಿಯಾನಕ್ಕೆ ಚಾಲನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನ್ಯಾಯಾಲಯಗಳಲ್ಲಿ ಬಾಕಿ ಇರುವ ಹಾಗೂ ಪೂರ್ವ ವಿವಾದ ಹಂತದಲ್ಲಿರುವ ಸೂಕ್ತ ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ ಸ್ನೇಹಪೂರ್ಣ, ವೇಗವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಬಗೆಹರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಮಾರ್ಗದರ್ಶನದಂತೆ ರಾಷ್ಟ್ರ ಮಟ್ಟದ ಮಧ್ಯಸ್ಥಿಕೆ ಅಭಿಯಾನ 2.0 ಗೆ ದೇಶಾದ್ಯಂತ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ ತಿಳಿಸಿದ್ದಾರೆ.
ಮಧ್ಯಸ್ಥಿಕೆಗೆ ಸೂಕ್ತವಾದ ಪ್ರಕರಣಗಳನ್ನು 31 ಜನೇವರಿ 2026 ರೊಳಗಾಗಿ ಗುರುತಿಸಲಾಗುವುದು. ಗುರುತಿಸಲಾದ ಪ್ರಕರಣಗಳನ್ನು ಹೈಕೋರ್ಟ ಮಿಡಿಯೇಶನ್ ನಿಯಮಗಳಂತೆ 90 ದಿನಗಳೊಳಗೆ ಉಲ್ಲೇಖಿಸಲಾಗುವುದು. ಮಧ್ಯಸ್ಥಿಕೆಗೆ
ಮಧ್ಯಸ್ಥಿಕೆ ಮೂಲಕ ವಿವಾದಗಳು ಬಗೆಹರಿದರೆ, ಸಮಯ, ಹಣ ಮತ್ತು ಮಾನಸಿಕ ಒತ್ತಡ ಉಳಿಯುವುದರೊಂದಿಗೆ ಪಕ್ಷಗಳ ನಡುವಿನ ಸಂಬಂಧವೂ ಉಳಿಯುತ್ತದೆ. ಸಾರ್ವಜನಿಕರು ಮಧ್ಯಸ್ಥಿಕೆ ಅಭಿಯಾನದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.


