Kannada NewsKarnataka NewsLatest

*ನೇಹಾ ಹತ್ಯೆ ಪ್ರಕರಣ; ಆರೋಪಿ ರುಂಡ ಚಂಡಾಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ*

ನಾಳೆ ಹುಬ್ಬಳ್ಳಿ ಬಂದ್ ಗೆ ಕರೆ

Home add -Advt


ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಆರೋಪಿ ಫಯಾಜ್ ನನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿ ಫಯಾಜ್ ಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಪ್ರತಿಭಟನೆ ನಡೆಸಿವೆ. ಈ ಬೆಳವಣಿಗೆಗಳ ಬೆನ್ನಲ್ಲೇ ಆರೋಪಿ ಹತ್ಯೆ ಮಾಡಿದರೆ 10 ಲಕ್ಷ ಬಹುಮಾನ ನೀಡುವುದಾಗಿ ಜಯ ಕರ್ನಾಟಕ ಮುಖಂಡರೊಬ್ಬರು ಘೋಷಿಸಿದ್ದಾರೆ.

ಆರೋಪಿ ಫಯಾಜ್ ರುಂಡ ಚಂಡಾಡಿದವರಿಗೆ 10 ಲಕ್ಷ ಬಹುಮಾನ ನೀಡುತ್ತೇವೆ ಎಂದು ಜಯ ಕರ್ನಾಟಕ ಮುಖಂಡ ಇಜಾರಿ ಘೋಷಿಸಿದ್ದಾರೆ.

ಅಲ್ಲದೆ ಫಯಾಜ್ ಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ನಾಳೆ ಹುಬ್ಬಳ್ಳಿ ಬಂದ್ ಕರೆ ನೀಡಲಾಗಿದ್ದು, ನಾಳೆ ವಾಣಿಜ್ಯ ನಗರಿ ಹುಬ್ಬಳ್ಳಿ ಬಂದ್ ಮಾಡಲಾಗುವುದು. ಯಾರ ಮನೆಯಲ್ಲಿ ಹೆಣ್ಣುಮಕ್ಕಳಿದ್ದಾರೊ ಅವರೆಲ್ಲಾ ಬಂದ್ ಬೆಂಬಲಿಸಿ. ನಾಳೆ ಬಂದ್ ಅಂಗವಾಗಿ ಬಿವಿಬಿ ಕಾಲೇಜಿನಿಂದ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.

Related Articles

Back to top button