Belagavi NewsBelgaum NewsElection NewsKannada NewsKarnataka NewsPolitics

*ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟ ಕಾಂಗ್ರೆಸ್* : *35ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ*

* ಪ್ರಗತಿವಾಹಿನಿ ಸುದ್ದಿ, *ರಾಮದುರ್ಗ:* ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಸುಳೇಭಾವಿ, ಬಾಳೆಕುಂದ್ರಿ, ಹೊನ್ನಿಹಾಳ ಹಾಗೂ ಯದ್ದಲಬಾವಿ ಹಟ್ಟಿ ಗ್ರಾಮದ ಪ್ರಮುಖರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 

ಸುಳೇಭಾವಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ನಾನಪ್ಪ ಪಾರ್ವತಿ, ಮಾಜಿ ಉಪಾಧ್ಯಕ್ಷ ದ್ಯಾಮಣ್ಣ ಒಂಟಿ, ಜೀವಣಪ್ಪ‌ ಶಿಂಧೆ, ಆಶೋಕ್ ಯರಜರವಿ, ಲಕ್ಷ್ಮಣ್ ಮೂರಾರಿ, ದೇವಪ್ಪ ಪಾಟೀಲ್, ಯಮನಪ್ಪ ರಾಹುಲ್ ಗೌಡರ್, ಅಶೋಕ್ ಒಂಟಿ, ಮಹೇಶ್ ದೇವಡಿ, ಬಾಳಕೇಶ್ ಭೀಮಪ್ಪ ಕಿರಿಬನೂರು, ಬಸವಪ್ಪ ಮ್ಯಾಕಲೇಗೊಳ್, ವಿಠಲ್ ಪಾರ್ವತಿ, ಕಿಟ್ಟು ತಿಗಡಿ, ಸಂತೋಷ ಸುರ್ವೆ, ಪ್ರಕಾಶ್ ಮರಗಿ, ಪ್ರಕಾಶ್ ಬೈರಪ್ಪನವರ್, ಮಂಜುನಾಥ್ ದುದುಮಿ, ತಮ್ಮಣ್ಣ ಕಾಮ್ಕರ್ ಸೇರಿದಂತೆ 35ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್ ಸೇರಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎಲ್ಲರಿಗೂ ಹಾರ ಮತ್ತು ಕಾಂಗ್ರೆಸ್ ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿದರು.

Home add -Advt

 *ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್*

ಗ್ರಾಮದ ಮುಖಂಡರು ಚುನಾವಣಾ ಹೊಸ್ತಿನಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿರುವುದರಿಂದ ಬಿಜೆಪಿಗೆ ಭಾರಿ ಹಿನ್ನಡೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಅನ್ಯ ಪಕ್ಷಗಳ ಮತ್ತಷ್ಟು ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

Related Articles

Back to top button