World

*ನೇಪಾಳ, ಚೀನಾದಲ್ಲಿ ಭೀಕರ ಭೂಕಂಪ: 36ಕ್ಕೂ ಹೆಚ್ಚು ಜನರು ಸಾವು*

ಪ್ರಗತಿವಾಹಿನಿ ಸುದ್ದಿ: ನೇಪಾಳ ಹಾಗೂ ಚೀನಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 36ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ನೇಪಾಳದ ಮಧ್ಯ ಭಾಗ ಸೇರಿ ರಾಜಧಾನಿ ಕಠ್ಮಂಡುವಿನಲ್ಲಿ 7.1ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಇಂದು ಬೆಳಿಗ್ಗೆ 6:50ರ ಸುಮಾರಿಗೆ ಈ ಘಟನೆ ನಡೆದಿದೆ. ಭೂಕಂಪದ ಕೇಂದ್ರ ಬಿಂದು ನೇಪಾಳದ ಲೋಬುಚಿ ಪ್ರದೇಶದಿಂದ 93 ಕಿಮೀ ದೂರದಲ್ಲಿದೆ ಎಂದು ಭೂವಿಜ್ಞಾನ ಸಮೀಕ್ಷೆ ತಿಳಿಸಿದೆ.

ಚೀನಾ, ಟಿಬೆಟ್ ನಲ್ಲಿಯೂ 7.1ರಷ್ಟು ಪ್ರಬಲ ಭೂಕಂಪವಾಗಿದ್ದು, ಕಟ್ಟಡಗಳು ಕುಸಿದು ಬಿದ್ದಿವೆ. ಸಾವು ನೋವುಗಳು ಸಂಭವಿಸಿವೆ. ಭಾರತದ ಕೆಲ ಭಾಗಗಳಲ್ಲಿಯೂ ಭೂ ಕಂಪದ ಅನುಭವವಾಗಿದೆ.

ನೇಪಾಳ, ಚೀನಾ, ಟಿಬೆಟ್ ನಲ್ಲಿ ಸಭವಿಸಿದ ಭೂಕಂಪದಲ್ಲಿ 36 ಜನರು ಸಾವನ್ನಪ್ಪಿದ್ದಾರೆ. ಟಿಬೆಟ್ ನಲ್ಲಿ 62 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಚೀನಾ ಹಾಗೂ ನೇಪಾಳ ಗಡಿ ಭಾಗದಲ್ಲಿ ಮನೆಗಳು ಧ್ವಂಸಗೊಂಡಿದ್ದು, ರಸ್ತೆಗಳು ಬಿರುಕು ಬಿಟ್ಟಿವೆ. ಸಾವು-ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button