
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಬೆಳಗಾವಿ ಮಹಾನಗರ ಪಾಲಿಕೆ ಯ ನೂತನ ಆಯುಕ್ತ ಅಶೋಕ ದುಡಗುಂಟಿ ಶನಿವಾರ ನಗರ ಪ್ರದಕ್ಷಣೆ ಹಾಕಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಅಧಿಕಾರಿಗಳು ತಮಗೆ ನೀಡಿದ ಜವಾಬ್ದಾರಿಯನ್ನು ಚಾಚು ತಪ್ಪದೇ ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದರು. ಕೆಲವೊಂದು ಕಡೆ ಚರಂಡಿಗಳು ತುಂಬಿ ತುಳುಕುತ್ತಿದ್ದು, ಅವುಗಳನ್ನ ಸ್ವಚ್ಛಗೊಳಿಸಲು ಕ್ರಮಕೈಗೊಳ್ಳುವಂತೆ ಆದೇಶಿಸಿದರು.
ಗೋವಾವೇಸ್‍ನಲ್ಲಿ ನಡೆಯುತ್ತಿರುವ ಕಾಮಗಾರಿ, ಟಿಳಕವಾಡಿಯ ಶುಕ್ರವಾರ ಪೇಟೆಯ ಸಿಸಿ ರಸ್ತೆ, ಕಲಾಮಂದಿರದ ವಾಣಿಜ್ಯ ಸಂಕೀರ್ಣ, ಟಿಳಕವಾಡಿ ತರಕಾರಿ ಮಾರುಕಟ್ಟೆ ಇನ್ನುಳಿದ ಕಡೆಗೆ ತೆರಳಿ ಕಾಮಗಾರಿ ಪರಿಶೀಲಿಸಿದರು.
ನನ್ನ ಅವಧಿಯಲ್ಲಿ ಪಾಲಿಕೆಯ ಜಟಿಲ ಸಮಸ್ಯೆಗಳಿಗೆ ಮುಕ್ತಿ ಹಾಡಿ, ಎಲ್ಲ ಕಾಮಗಾರಿಗಳನ್ನು ಕೈಗೊಂಡು ಬೆಳಗಾವಿ ನಗರವನ್ನು ಮಾದರಿ ಮಾಡಲಾಗುವುದು ಎಂದರು.
ಈ ವೇಳೆ ಅಭಿಯಂತರರಾದ ಲಕ್ಷ್ಮೀ ನಿಪ್ಪಾಣಿಕರ, ಸ್ಮಾರ್ಟ್‍ಸಿಟಿ ಯೋಜನೆಯ ಅಧಿಕಾರಿಗಳು, ಪರಿಸರ ಅಧಿಕಾರಿ ಉದಯಕುಮಾರ ತಳವಾರ ಹಾಜರಿದ್ದರು.
.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ