6ನೇ ಬಾರಿಯ ಆಪರೇಶನ್ ಕಮಲ ಸರ್ಕಸ್ ಇನ್ನೇನು ಯಶಸ್ವಿಯಾಯಿತು ಎನ್ನುವ ಹೊತ್ತಿಗೆ ಬಿಜೆಪಿ ತಾನೇ ವಿವಾದವೊಂದನ್ನು ಮೈಮೇಲೆಳೆದುಕೊಂಡಿದೆ.
ಇದನ್ನೇ ಕಾಯುತ್ತಿದ್ದರೆನ್ನುವಂತೆ ಕೆಲವರು ಅದಕ್ಕೆ ಸರಿಯಾದ ಪ್ರಚಾರ ಕೊಡುವಲ್ಲೂ ಯಶಸ್ವಿಯಾಗಿದ್ದಾರೆ.
Home add -Advt
ಬಿಜೆಪಿ ಮುಖಂಡರಾದ ಮುರಳೀಧರ್ ರಾವ್ ಮತ್ತು ಕೆ.ಎಸ್. ಈಶ್ವರಪ್ಪ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರನ್ನು ಭೇಟಿ ಮಾಡಿದ ವಿವಾದ ಪಕ್ಷದ ಆಂತರಿಕ ವಲಯದಲ್ಲೂ ಭಾರಿ ಬಿರುಗಾಳಿ ಎಬ್ಬಿಸಿದೆ.
ಸಚಿವ ಮಹೇಶ್, ಪ್ರವಾಸೋದ್ಯಮ ಇಲಾಖೆಯ ಕೆ.ಕೆ.ಗೆಸ್ಟ್ ಹೌಸ್ ನಲ್ಲಿ ಈ ಇಬ್ಬರು ಬಿಜೆಪಿ ಮುಖಂಡರ ಜೊತೆ ಚರ್ಚಿಸಿದ್ದರು. ಈ ಭೇಟಿ ಭಾರೀ ಸುದ್ದಿಯಾಗಿದೆ. ಇದೊಂದು ಆಕಸ್ಮಿಕ ಭೇಟಿಯೆಂದು ಎರಡೂ ಪಕ್ಷಗಳು ಸ್ಪಷ್ಟನೆ ನೀಡಿವೆ. ಆದರೆ, ಅವರು ಭೇಟಿಯಾಗುವ ಮುನ್ನವೇ ಮಾಧ್ಯಮಗಳಿಗೆ ಈ ಸುದ್ದಿ ಹೋಗಿದೆ.
ಸಚಿವರನ್ನು ನಾವು ಭೇಟಿಯಾಗಿದ್ದು ಎರಡೇ ನಿಮಿಷ, ಅಷ್ಟರಲ್ಲೇ ಕ್ಯಾಮರಾ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು, ನನ್ನ ಕ್ಷೇತ್ರದ ವ್ಯಾಪ್ತಿಯ ದೇವಾಲಯದ ಅಭಿವೃದ್ದಿಗೆ ಸಂಬಂಧಿಸಿದಂತೆ ಸಚಿವ ಮಹೇಶ್ ಅವರಲ್ಲಿ ಮನವಿ ಮಾಡಿದ್ದೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಇದು ರಾಜ್ಯ ರಾಜಕೀಯದಲ್ಲಿ ಚರ್ಚೆಯಾಗಿದ್ದಷ್ಟೆ ಅಲ್ಲ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಶಾ ಕೂಡ ಮುರಳಿಧರ ರಾವ್ ಮತ್ತು ಈಶ್ವರಪ್ಪ ವಿರುದ್ಧ ಗರಂ ಆಗಿದ್ದಾರೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಭೇಟಿ ಅತೃಪ್ತ ಶಾಸಕರಲ್ಲಿ ಯಾವ ರೀತಿಯ ಅಭಿಪ್ರಾಯ ಮೂಡಿಸುತ್ತದೆ ಎನ್ನುವ ಅರಿವಿದೆಯೇ ಎಂದು ತರಾಟೆಗೆ ತೆಗೆದುಕೊಂಡಿರುವ ಶಾ, ಮುರಳಿಧರ ರಾವ್ ಅವರನ್ನು ವಾಪಸ್ ಹೈದರಾಬಾದ್ ಗೆ ಕಳಿಸಿದ್ದಾರೆ.
ಅತೃಪ್ತರಲ್ಲಿ ಬಿಜೆಪಿ ಬಗ್ಗೆ ಸಂಶಯ ಮೂಡಿದರೆ ಅತೃಪ್ತ ಶಾಸಕರನ್ನು ಮರಳಿ ಸೆಳೆಯಲು ಸರಳವಾಗುತ್ತದೆ ಎನ್ನುವ ತಂತ್ರ ಈ ಕಾರ್ಯಾಚರಣೆಯ ಹಿಂದಿತ್ತು, ಇದಕ್ಕೆ ಬಿಜೆಪಿ ಮುಖಂಡರು ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ.
*ನಕಲಿ ದಾಖಲೆ ಸೃಷ್ಟಿಸಿ ರಾಣಿ ಚನ್ನಮ್ಮ ವಿವಿ ಕುಲಪತಿಯಾಗಿರುವ ಆರೋಪ: ತ್ಯಾಗರಾಜ್ ವಿರುದ್ಧ ಪ್ರತಿಭಟನೆ*
12 hours ago
*ಖಾಸಗಿ ಮೆಡಿಕಲ್ ಲಾಬಿಗೆ ಮಣಿದ ಸರ್ಕಾರ, ಹೈಕೋರ್ಟ್ ಆದೇಶ ಸ್ವಾಗತಾರ್ಹ: ಆರ್.ಅಶೋಕ್*
13 hours ago
*ಮೈಸೂರು ದಸರಾದಲ್ಲಿ ಏರ್ ಶೋಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮತಿ*
14 hours ago
*ಖಾಲಿ ಮಾತು ಬೇಡ, ಮೊದಲು ದುಡ್ಡು ಕೊಡಿಸಲಿ: ಕುಮಾರಸ್ವಾಮಿಯನ್ನು ಛೇಡಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್*
14 hours ago
*ನನ್ನ ಕ್ಷೇತ್ರದ ಮಕ್ಕಳು ಉನ್ನತ ಸ್ಥಾನಕ್ಕೇರುವುದನ್ನು ನೋಡುವುದೇ ನನ್ನ ಕನಸು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್* *ಕುದ್ರೆಮನಿ, ಬೆಕ್ಕಿನಕೇರಿ ಗ್ರಾಮಗಳಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ*