ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಹೊಸ ಒಮಿಕ್ರಾನ್ ಉಪ- ರೂಪಾಂತರಿ ಬಿಎಫ್.7 ರ ಮೊದಲ ಪ್ರಕರಣ ಭಾರತದಲ್ಲಿ ಪತ್ತೆಯಾಗಿದೆ.
ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ ಭಾರತದಲ್ಲಿ ಒಮಿಕ್ರಾನ್ ಉಪ-ರೂಪಾಂತರಿ ಬಿಎಫ್.7 ನ ಮೊದಲ ಪ್ರಕರಣವನ್ನು ಪತ್ತೆ ಮಾಡಿದೆ.
ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್‌ನ ಹಿರಿಯ ವಿಜ್ಞಾನಿ ಡಾ. ಮಾಧವಿ ಜೋಶಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ ಈ ವಿಷಯದಲ್ಲಿ ಯಾರೂ ಭಯಭೀತರಾಗಬಾರದು. ಜನರು ಮಾಸ್ಕ್ ಗಳನ್ನು ಧರಿಸುವುದು, ಗುಂಪುಗೂಡುವುದನ್ನು ತಪ್ಪಿಸುವುದು ಮತ್ತು ಕೈ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಗಮನಾರ್ಹವಾಗಿ, ಎರಡು ಹೊಸ ಒಮಿಕ್ರಾನ್ ಉಪ-ರೂಪಾಂತರಗಳು ಬಿಎಫ್.7 ಮತ್ತು ಬಿಎ.5.1.7 ಇತ್ತೀಚೆಗೆ ಚೀನಾದಲ್ಲಿ ಪತ್ತೆಯಾಗಿವೆ.
ಇನ್ನೂ ಎರಡು ದಿನ ಭಾರಿ ಮಳೆ; 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ