Kannada NewsKarnataka NewsLatest

ಸಿದ್ಧೇಶ್ವರ ಸ್ವಾಮಿಗಳಿಗೆ ಕನ್ಹೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ; ಸಣ್ಣ ಶಸ್ತ್ರ ಚಿಕಿತ್ಸೆ ಸಾಧ್ಯತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳಿಗೆ  ಕೊಲ್ಲಾಪುರದ ಕನ್ಹೇರಿ ಮಠದ ಆಸ್ಪತ್ರೆಯಲ್ಲಿ  ಚಿಕಿತ್ಸೆ ಮುಂದುವರಿದಿದೆ.

ಸ್ವಾಮೀಜಿಗಳ ಕಾಲಿಗೆ ಮತ್ತು ಕೈಗೆ ಪೆಟ್ಟಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ತೊಡೆಯ ಭಾಗ ಮತ್ತು ಬುಜದ ಭಾಗದಲ್ಲಿ  ಫ್ಯಾಕ್ಚರ್ ಆಗಿದೆ. ಸಣ್ಣ ಶಸ್ತ್ರ ಚಿಕಿತ್ಸೆ ಮಾಡಿದರೆ ಬೇಗ ಗುಣವಾಗಲಿದೆ ಎಂದು ವೈದ್ಯರು ಹೇಳಿದ್ದಾರೆ.  ಶಸ್ತ್ರಚಿಕಿತ್ಸೆಗೆ ಸ್ವಾಮೀಜಿಗಳ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ.

ಸ್ವಾಮೀಜಿಗಳು ಲವಲವಿಕೆಯಿಂದಲೇ ಇದ್ದಾರೆ. ತಾವೂ ನಗುತ್ತ, ಸುತ್ತಲಿದ್ದವರನ್ನೂ ನಗಿಸುತ್ತಿದ್ದಾರೆ. ಭಕ್ತರು ಗಾಭರಿಯಾಗುವ ಅವಶ್ಯಕತೆ ಇಲ್ಲ ಎಂದು ಮಠದ ಮತ್ತು ಆಸ್ಪತ್ರೆಯ ಮೂಲಗಳು ಪ್ರಗತಿವಾಹಿನಿಗೆ ತಿಳಿಸಿವೆ.

ಚಿಕ್ಕೋಡಿ ತಾಲೂಕಿನ ಕೇರೂರು‌ ಗ್ರಾಮದಲ್ಲಿ ಸೋಮವಾರ ಸಂಜೆ 6 ಗಂಟೆ ಹೊತ್ತಿಗೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಬಾತ್ ರೂಂ ನಲ್ಲಿ ಬಿದ್ದಿದ್ದು, ಕಾಲಿಗೆ ಗಾಯವಾಗಿದೆ.

Home add -Advt

ಕೇರೂರ ಗ್ರಾಮಕ್ಕೆ ಪ್ರವಚನ ನೀಡಲು ಸಿದ್ದೇಶ್ವರ ‌ಸ್ವಾಮೀಜಿ ಆಗಮಿಸಿದ್ದರು.  ಭಕ್ತರೊಬ್ಬರ ಫಾರ್ಮ್ ಹೌಸ್ ನಲ್ಲಿ ಸ್ವಾಮೀಜಿ ವಾಸ್ತವ್ಯ ಹೂಡಿದ್ದರು. ಸಂಜೆ ಬಾತ್ ರೂಂ ಗೆ ಹೊಗಿದ್ದ ಸಂದರ್ಭದಲ್ಲಿ ಅವರು ಆಯತಪ್ಪಿ ಬಿದ್ದರು. ನಂತರ ಕನ್ಹೇರಿ ಮಠದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿದ್ದು ಗಾಯಗೊಂಡ ಸಿದ್ಧೇಶ್ವರ ಸ್ವಾಮೀಜಿ; ಆಸ್ಪತ್ರೆಗೆ ದಾಖಲು

Related Articles

Back to top button