Latest

ಹೊಸ ವರ್ಷಚರಣೆ : 6 ಗಂಟೆಯಿಂದಲೇ ಕಠಿಣ ನಿರ್ಬಂಧ, ಹುಷಾರ್ ಎಂದ ಗೃಹ ಸಚಿವ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೋವಿಡ್ ಜತೆ ಜತೆಗೆ ರೂಪಾಂತರಿ ವೈರಸ್ ಒಮಿಕ್ರಾನ್ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕೂಡ ಹೊಸ ವರ್ಷಾಚರಣೆ ಸಂಭ್ರಮಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವರು, ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಸ್ವಲ್ಪ ಉದಾಸೀನ ಮಾಡಿದ್ದರಿಂದ ಪರಿಸ್ಥಿತಿ ಕೈಮೀರುವಂತಾಯಿತು. ಹಾಗಾಗಿ ಈ ಬಾರಿ ಮೊದಲೇ ಮುಂಜಾಗೃತಾ ಕ್ರಮಕೈಗೊಳ್ಳಲಾಗಿದ್ದು, ಹತ್ತು ದಿನಗಳಕಾಲ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಹೊಸ ವರ್ಷಾಚರಣೆಗಿಂತ ಬದುಕು ಮುಖ್ಯವಾಗುತ್ತದೆ. ಜನರು ಕೂಡ ಪರಿಸ್ಥಿತಿ ಗಂಭೀರತೆ ಅರಿತು ಸಹಕರಿಸಬೇಕು. ಯಾರೂ ಕೂಡ ಬಹಿರಂಗ ಸಂಭ್ರಮಾಚರಣೆಯಲ್ಲಿ ತೊಡಗುವಂತಿಲ್ಲ ಎಂದರು.

ರಾಜಧಾನಿ ಬೆಂಗಳೂರಿನಲ್ಲಿ ಸಂಜೆ 6 ಗಂಟೆಯಿಂದಲೇ ನಿರ್ಬಂಧ ಜಾರಿಯಾಗಲಿದೆ. ಹೊಸ ವರ್ಷಾಚರಣೆಯ ಪ್ರಮುಖ ಸ್ಥಳಗಳಾಗಿದ್ದ ಎಂಜಿ ರೋಡ್, ಬ್ರಿಗೇಡ್ ರೋಡ್ ಗಳನ್ನು ಬಂದ್ ಮಾಡಲಾಗುವುದು. ನಗರದ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗುವುದು. ಸಂಜೆ ಬಳಿಕ ಸಾರ್ವಜನಿಕ ಓಡಾಟಕ್ಕೆ ಅವಕಾಶವಿಲ್ಲ. ಹೊಸ ವರ್ಷ ಆಚರಿಸುವುದಿದ್ದರೆ ಮನೆಗಳಲ್ಲಿಯೇ ಆಚರಿಸಬಹುದು. ಆದರೆ ಗುಂಪು ಗೂಡುವಂತಿಲ್ಲ. ನಿಯಮ ಮೀರಿ ಅನಗತ್ಯವಾಗಿ ಜನರು ಓಡಾಟ ನಡೆಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈಗಾಗಲೇ ಮಹಾರಾಷ್ಟ್ರದಲ್ಲಿ ಕೊರೊನಾ ಸ್ಫೋಟಗೊಂಡಿದೆ. ಇನ್ನು ರಾಜ್ಯದಲ್ಲಿಯೂ ದಿನದಿಂದ ದಿನಕ್ಕೆ ಕೋವಿಡ್ ಕೇಸ್ ಹೆಚ್ಚುತ್ತಿದೆ. ಒಮಿಕ್ರಾನ್ ಭೀತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸಂಭ್ರಮಾಚರಣೆಗಿಂತ ಬುದುಕು, ಜೀವನ ಮುಖ್ಯವಾಗುತ್ತದೆ. ಜನರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ಚಿನ್ನ-ಬೆಳ್ಳಿ ದರ ಇಂದು ಎಷ್ಟಿದೆ?

Home add -Advt

Related Articles

Back to top button