ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ವೇಳೆಯೇ ದುರಂತವೊಂದು ಸಂಭವಿಸಿದೆ. ರಾಜ್ಯ ರಾಜದಾನಿ ಬೆಂಗಳೂರಿನಲ್ಲಿ ಮಧ್ಯರಾತ್ರಿ ಹೊಸ ವರ್ಷದ ಸಂಭ್ರಮ ಮುಗಿಲುಮುಟ್ಟಿತ್ತು. ಈ ಮಧ್ಯೆ ಕೊಟ್ಟಿಗೆಪಾಳ್ಯದಲ್ಲಿ ಅವಘಡ ಸಂಭವಿಸಿದೆ.
ಹೊಸ ವರ್ಷದ ಪಾರ್ಟಿಯ ಗುಂಗಲ್ಲಿ ಮುಳುಗಿದ್ದ ಯುವಕ ಕಟ್ಟಡದಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕೊಟ್ಟಿಗೆಪಾಳ್ಯದಲ್ಲಿ ನಡೆದಿದೆ. ಓಡಿಶಾ ಮೂಲದ ಬಾಪಿ ಎಂಬ ಯುವಕ ಮೃತಪಟ್ಟಿದ್ದಾನೆ.
ಹೊಸ ವರ್ಷದ ಭರ್ಜರಿ ಪಾರ್ಟಿ ಮುಸಿದ ಯುವಕ ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡ ದಾಟಲು ಹೋಗಿದ್ದಾನೆ. ಈ ವೇಳೆ ಕಟ್ಟಡದ 3ನೇ ಫ್ಲೋರ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.
ಯುವಕ ಕಾಟನ್ ಬಾಕ್ಸ್ ಸಿದ್ಧಪಡಿಸುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ತಡರಾತ್ರಿವರೆಗೂ ಕಟ್ಟಡದ ಮೇಲೆ ಸಂಭ್ರಮಾಚರಣೆಯ ಪಾರ್ಟಿಯಲ್ಲಿ ತೊಡಗಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಿದ್ದೇಶ್ವರ ಶ್ರೀಗಳ ಆರೋಗ್ಯ ಕಳವಳಕಾರಿಯಾಗಿದೆ – ದರ್ಶನ ಪಡೆದ ಬಳಿಕ ಸಿಎಂ ಬೊಮ್ಮಾಯಿ ಹೇಳಿಕೆ
https://pragati.taskdun.com/siddeshwar-sris-health-is-a-matter-of-concern-cm-bommais-statement-after-having-darshan/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ