Kannada NewsKarnataka News

ಅಡ್ಡಾದಿಡ್ಡಿ ವಾಹನ ನಿಲುಗಡೆಗೆ ಬ್ರೇಕ್

ಅಡ್ಡಾದಿಡ್ಡಿ ವಾಹನ ನಿಲುಗಡೆಗೆ ಬ್ರೇಕ್

 ಪ್ರಗತಿವಾಹಿನಿ ಸುದ್ದಿ, ಹಳ್ಳೂರ :

ಗ್ರಾಮದಲ್ಲಿ ಪ್ರತಿ ಶನಿವಾರ ಸಂತೆ ಇರುವುದರಿಂದ ಗ್ರಾಮದ ಸುತ್ತ ಮುತ್ತಲಿನ ರೈತರು, ವ್ಯಾಪಾರಸ್ಥರು ಕುಡುವುದರಿಂದ ಸಾರ್ವಜನಿಕರು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಗಾಡಿಗಳನ್ನು ನಿಲ್ಲಿಸುವರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತು.

ಆದ್ದರಿಂದ ಗ್ರಾಮದಲ್ಲಿ ವಾಹನಗಳಿಗೆ ಹೋಗಲು ತೊಂದರೆ ಆದ ಕಾರಣ ಗ್ರಾಮ ಪಂಚಾಯತ ಅಧಿಕಾರಿಗಳು ಹಾಗೂ ಸಿಬ್ಬಂದಿ  ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ನೋಡಿ ರಸ್ತೆ ಬದಿಯಲ್ಲಿ ಲೈನ್ ಹಾಕಿ ವಾಹನ ನಿಲ್ಲಿಸಲು ಹಾಗೂ ವ್ಯಾಪರಸ್ಥರು ಕುಳಿತುಕೊಳ್ಳಲು ವ್ಯವಸ್ಥೆ ಮಾಡುತ್ತಿದ್ದಾರೆ. ಅಧಿಕಾರಿಗಳು ತಾವೇ ಪ್ರತಿ ಶನಿವಾರ ನಿಂತುಕೊಂಡು ವ್ಯವಸ್ಥೆ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳು ಸ್ವಲ್ಪ ಕಡಿಮೆ ಆಗಿವೆ.

 ನಮ್ಮ ಗ್ರಾಮದಲ್ಲಿ ಪ್ರತಿ ಶನಿವಾರ  ಸುತ್ತ ಮುತ್ತಲಿನ ಗ್ರಾಮಸ್ಥರು ಸಂತೆಗೆ ಬರುವುದರಿಂದ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿತು. ಆದರೆ ಗ್ರಾಮ ಪಂಚಾಯತ ಅಧಿಕಾರಿಗಳು ಈ ತೊಂದರೆ ಸರಿ ಪಡಿಸುವ ಸಲ್ಲುವಾಗಿ ತಾವೇ ನಿಂತುಕೊಂಡು ತೊಂದರೆ ಉಂಟಾಗದ ರೀತಿಯಲ್ಲಿ ವ್ಯವಸ್ಥೆ ಮಾಡುತ್ತಿರುವುದು  ಶ್ಲಾಘನೀಯವಾಗಿದೆ.
        -ಹಣಮಂತ ಹಡಪದ (ಸಮಾಜ ಸೇವಕ)

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button