Kannada NewsKarnataka NewsLatest

ನಿಡಸೋಸಿ ಶ್ರೀ ಯೋಗಕ್ಷೇಮ ವಿಚಾರಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ನಿಡಸೋಸಿಯ ಸಿದ್ಧ ಸಂಸ್ಥಾನ ಮಠದ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳನ್ನು  ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು.

Home add -Advt

ಅಪಘಾತದ ಸಂದರ್ಭದಲ್ಲಿ ಶ್ರೀಗಳ ವಾಹನ ನುಜ್ಜುಗುಜ್ಜಾಗಿದ್ದರೂ ಶ್ರೀಗಳಿಗೆ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದು ನಮ್ಮೆಲ್ಲರ ಸುದೈವವೇ ಸರಿ ಎಂದ ಲಕ್ಷ್ಮೀ ಹೆಬ್ಬಾಳಕರ    ಶ್ರೀಗಳಿಗೆ ಭಗವಂತ ಹೆಚ್ಚಿನ ಆರೋಗ್ಯ ಭಾಗ್ಯವನ್ನು ಕರುಣಿಸಲೆಂದು ಈ ಸಂದರ್ಭದಲ್ಲಿ ಪ್ರಾರ್ಥಿಸಿದರು.

ಸರಳ ವಾಸ್ತು ತಜ್ಞ ಶ್ರೀ ಚಂದ್ರಶೇಖರ ಗುರೂಜಿಯವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ವಾಪಸ್ ಬರುವಾಗ ಧಾರವಾಡದ ಹೊರವಲಯದಲ್ಲಿ ಕಾರು ಅಪಘಾತವಾಗಿ ನಿಡಸೋಸಿ ಶ್ರೀಗಳು ಗಾಯಗೊಂಡಿದ್ದರು. ಸೂಕ್ತ ಚಿಕಿತ್ಸೆ ನಂತರ ಕ್ಷಿಪ್ರ ಚೇತರಿಸಿಕೊಂಡಿದ್ದರು.

ಚಿತ್ರಕಲಾ ಪರಿಷತ್ತಿನಲ್ಲಿ ಕಣ್ಮನ ಸೆಳೆಯಲಿರುವ ‘ಬೆಂಗಳೂರು ಉತ್ಸವ’

Related Articles

Back to top button