Latest

ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮಹಾರಾಷ್ಟ್ರ ಏಕೀಕರಣ ಸಮಿತಿ ಬ್ಯಾನ್ ಮಾಡಬೇಕೆಂದು ಒತ್ತಾಯಿಸಿ ಕನ್ನಡ ಒಕ್ಕೂಟ ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್ ಕರೆ ನೀಡಿದೆ.

ಬೆಂಗಳೂರಿನಲ್ಲಿ ನಡೆದ ಒಕ್ಕೂಟದ ಸಭೆಯ ನಂತರ ಕನ್ನಡ ಚಳುವಳಿ ವಾಟಾಳ ಪಕ್ಷದ ನಾಯಕ ವಾಟಾಳ ನಾಗರಾಜ ಈ ವಿಷಯ ತಿಳಿಸಿದ್ದಾರೆ.

ಅವಶ್ಯಕ ಸೇವೆಗಳನ್ನು ಹೊರತುಪಡಿಸಿ ಅಂದು ಎಲ್ಲವೂ ಬಂದ್ ಆಗಲಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಪೂರ್ಣ ಬಂದ್ ಆಗಲಿದೆ ಎಂದು ತಿಳಿಸಿದರು.

ಇಡೀ ರಾಜ್ಯ ಒಂದಾಗಬೇಕು. ಎಲ್ಲ ಕಡೆ ಬಂದಾಗಬೇಕು. ಪಕ್ಷಾತೀತವಾಗಿ ಬಂದ್ ನಡೆಸಬೇಕು. ಈವರೆಗಿನ ಬಂದ್ ಅಲ್ಲ ಇದು. ಕನ್ನಡಿಗರ ಹೃದಯದಿಂದ ಮಾಡುವ ಬಂದ್ ಇದು ಎಂದು ಅವರು ತಿಳಿಸಿದರು.

Home add -Advt

ಸುಮಾರು 30ಕ್ಕೂ ಹೆಚ್ಚು ಸಂಘಟನೆಗಳು ಸಭೆಯಲ್ಲಿ ಭಾಗವಹಿಸಿದ್ದವು.

ರಾಣಿ ಚೆನ್ನಮ್ಮ ವಿವಿ ಕಟ್ಟಡಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೂಮಿಪೂಜೆ

Related Articles

Back to top button