Belagavi NewsBelgaum NewsKannada NewsKarnataka NewsLatest

*ಧೂಮ್ 2 ಮಾದರಿಯಲ್ಲಿ ಕಳ್ಳತನ, ಜಾನ್ ಅಬ್ರಹಾಂ ಫಾಲೋವರ್ ಅರೆಸ್ಟ್* *ಇನಸ್ಪೆಕ್ಟರ್ ಜಾವೀದ್ ಮುಷಾಪುರೆ ತಂಡದ ಕಾರ್ಯಾಚರಣೆಯೇ ರೋಚಕ* *ಜಿಲ್ಲೆಯಲ್ಲೇ ಅತೀ ದೊಡ್ಡ ಪ್ರಕರಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಐಷಾರಾಮಿ ಜೀವನ ನಡೆಸಲು ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಖತರ್ನಾಕ್ ಕಳ್ಳನನ್ನು ಬೆಳಗಾವಿಯ ಯಮಕನಮರಡಿ ಫೋಲಿಸರು ಬಂಧಿಸಿದ್ದಾರೆ.

ಬೆಳಗಾವಿಯ ಮಹಾಂತೇಶ ನಗರದ ಸುರೇಶ ಮಾರುತಿ ನಾಯಿಕ  (37) ಬಂಧಿತ ಆರೋಪಿ. ಯಮಕನಮರಡಿ ವ್ಯಾಪ್ತಿಯಲ್ಲಿರುವ ಮನೆಯ ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣ ದೋಚಿದ  ಪ್ರಕರಣ ದಾಖಲಾಗಿತ್ತು. ಕಳ್ಳತನ ಪ್ರಕರಣದ ಆರೋಪಿ ಪತ್ತೆಗಾಗಿ ಬಲೆ ಬೀಸಿದ ಯಮಕನಮರಡಿ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನಿಂದ 97 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 

Home add -Advt

ಅ.16  ರಂದು  ಅ. 22 ರಂದು  ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿ ಮನೆಗೆ ನುಗ್ಗಿ  ಕಳ್ಳತನ ಮಾಡಿ ಪರಾರಿಯಾಗಿದ್ದ. ಕುಖ್ಯಾತ ಆರೋಪಿಯನ್ನು ಯಮಕನಮರಡಿ ಪೊಲೀಸರು ಬಂಧಿಸಿ ಆತನಿಂದ ಸತ್ಯ ಬಾಯ್ಬಿಡಿಸಿದ್ದಾರೆ. ಆರೋಪಿಯನ್ನು ಬಂಧಿಸಿದಾಗ ತಪ್ಪೊಪಿಕೊಂಡಿದ್ದಾನೆ.  

ಬಂಧಿತನಿಂದ 1280 ಗ್ರಾಂ.  ಚಿನ್ನಾಭರಣ, 8 1/2 ಕೆ.ಜಿ. ಬೆಳ್ಳಿ , 1,25 ಲಕ್ಷ ರೂ. ನಗದು   1 ಥಾರ್ ವಾಹನ, 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.  

ಯಮಕನಮರಡಿಯಲ್ಲಿ ಅ.22ರಂದು  ಕಳ್ಳತನವಾದ 70 ಗ್ರಾಂ. ಚಿನ್ನಾಬಂಗಾರ, 170 ಗ್ರಾಂ ಬೆಳ್ಳಿ ಮತ್ತು  22 ಸಾವಿರ ರೂ. ನಗದು , ಮಣಗುತ್ತಿಯಲ್ಲಿ ಕಳ್ಳತನ ಮಾಡಿದ್ದ  ಚಿನ್ನಾಭರಣವನ್ನು  ಪೊಲೀಸರು ವಶಕ್ಕೆ ಪಡೆದಿದ್ದಾರೆ.   

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಭೀಮಾಶಂಕರ ಗುಳೇದ ಶ್ಲಾಘನೆ ವ್ಯಕ್ತಪಡಿಸಿ, ಬಹುಮಾನವನ್ನು ಘೋಷಿಸಿದ್ದಾರೆ. 

ಧೂಮ್ 2 ಮಾದರಿ:

ಆರೋಪಿ ಸುರೇಶ ನಾಯಿಕ ನಟ ಜಾನ್ ಅಬ್ರಾಹಂ ಫಾಲೋವರ್ ಆಗಿದ್ದು, ಧೂಮ್ 2 ಮಾದರಿಯಲ್ಲೇ ಕಳ್ಳತನ ನಡೆಸುತ್ತಿದ್ದ. ಜಾನ್ ಅಬ್ರಾಹಂ ನಂತೆಯೇ ಜೀವನ ಶೈಲಿ ನಡೆಸುತ್ತಿದ್ದ ಈತ, ಅವನ ರೀತಿಯಲ್ಲೇ ಬೈಕ್ ಓಡಿಸುತ್ತಿದ್ದ. ಬೈಕ್ ಲೈಟ್ ಗಳು ಸಹ ಸ್ವಲ್ಪ ಸ್ವಪ್ಲ ದೂರ ಓಡಿಸುತ್ತಿದ್ದಂತೆ ಕಲರೆ ಬದಲಾಗುತ್ತಿತ್ತು. ಕಳ್ಳತನಕ್ಕೆ ಹೋಗುವಾಗ ಎಲ್ಲೂ ಮೋಬೈಲ್ ಒಯ್ಯುತ್ತಿರಲಿಲ್ಲ, ಮುಖ ಕಾಣದಂತೆ ಮಾಸ್ಕ್ ಧರಿಸಿ ಹೋಗುತ್ತಿದ್ದುದರಿಂದ ಯಾವುದೇ ಸಿಸಿಟಿವಿ ಕ್ಯಾಮರಾದಲ್ಲಿ ಮುಖ ಕಾಣಿಸುತ್ತಿಲ್ಲ. ಧೂಮ್ 2 ಮಾದರಿಯಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುವ ಕಲೆ ಕಲಿತಿದ್ದ.

ಒಂದು ಥಾರ್ ವಾಹನ ಮತ್ತು ಸ್ಫೋರ್ಟ್ಸ್ ಬೈಕ್ ಆಲ್ಟ್ರೇಶನ್ ಮಾಡಿ ಬಳಸುತ್ತಿದ್ದ. ಚಿತ್ರದಲ್ಲಿ ಅವನದ್ದೇ ನಟನೆ ಅನುಸರಿಸಿ ಕಳ್ಳತನ ಮಾಡುತ್ತಿದ್ದ. ಈತನ ವಿರುದ್ಧ 21ಕ್ಕೂ ಹೆಚ್ಚು ಪ್ರಕರಣಗಳಿವೆ. ಯಮಕನಮರಡಿ ಠಾಣೆ ವ್ಯಾಪ್ತಿಯಲ್ಲಿ 4 ಪ್ರಕರಣಗಳಿವೆ. ಇನಸ್ಪೆಕ್ಟರ್ ಜಾವೇಜ್ ಮುಷಾಪುರೆ ನೇತೃತ್ವದ ತಂಡ ಸಿನಿಮೀಯ ಮಾದರಿಯಲ್ಲಿ ಪ್ರಕರಣ ಭೇಧಿಸಿದೆ. ಆತನ ದೇಹ, ವಾಹನ, ಡ್ರೆಸ್ ಮತ್ತಿತರ ವಿಷಯಗಳನ್ನೇ ಆಧಾರವಾಗಿಸಿಕೊಂಡು, ಚಾಣಾಕ್ಷತನದಿಂದ ಆತನನ್ನು ಪತ್ತೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಕರಣ ಭೇಧಿಸಿರುವುದು ಇದೇ ಮೊದಲು.

Related Articles

Back to top button