Belagavi NewsBelgaum News

*ನಿಜಗುಣ ದೇವರಿಗೆ ನಿಜಗುಣ ದೇವ ಮಹಾಸ್ವಾಮಿ ಎಂಬ ಅಭಿದಾನವನ್ನು ದಯಪಾಲಿಸಿದ ನಿಡಸೋಸಿ ಮತ್ತು ಚಂದರಗಿ ಶ್ರೀಗಳು*

ಪ್ರಗತಿವಾಹಿನಿ ಸುದ್ದಿ: ಪಿ.ಜಿ.ಹುಣಶ್ಯಾಳದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ನಿಜಗುಣ ದೇವರಿಗೆ ಶ್ರೀ ನಿಜಗುಣ ದೇವಮಹಾ ಸ್ವಾಮಿಗಳು ಎಂಬ ಅಭಿಧಾನವನ್ನಿತ್ತು, ಪೇಟಾ ತೊಡಿಸಿ ವಿಶೇಷವಾಗಿ ಗೌರವಿಸಿದ ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿ ಹಾಗೂ ಕಟಕೋಳ ಎಂ ಚಂದರಗಿ ಹಿರೇಮಠದ ಶ್ರೀ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಅವರು ಹುಕ್ಕೇರಿ ನಗರದ ಶ್ರೀ ಹಿರೇಮಠದ ದಸರಾ ಉತ್ಸವದ ಪ್ರಾರಂಭದ ದಿನ ಖ್ಯಾತ ಸಾಹಿತಿ, ಕವಿ, ಪ್ರವಚನಾಕಾರರಾದ ಪಿ.ಜಿ. ಹುಣಶ್ಯಾಳದ ನಿಜಗುಣ ದೇವರಿಗೆ ಶ್ರೀ ನಿಜಗುಣ ಸ್ವಾಮೀಜಿಗಳು ಎಂಬ ಅಭಿಧಾನವನ್ನು ಇಟ್ಟು ಉಭಯ ಶ್ರೀಗಳು ಆಶೀರ್ವದಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀ ನಿಜಗುಣ ದೇವರು ಇಂಚಲದ ಶಿವಾನಂದ ಭಾರತಿ ಮಹಾಸ್ವಾಮೀಜಿಗಳ ಕೃಪಾಶೀರ್ವಾದದಿಂದ ಇಂದು ನಿಡಸೋಸಿಯ ಜಗದ್ಗುರುಗಳು, ಕಟಕೋಳ ಎಂ ಚಂದರಗಿಯ ಶ್ರೀಗಳು ನಿಜಗುಣ ಶ್ರೀಗಳು ಎಂಬ ಅಭಿನಾನವನ್ನಿತ್ತು ಆಶೀರ್ವದಿಸಿರುವುದು ನಮಗೆ ಸಂತೋಷ ತಂದಿದೆ. ನಿಜಗುಣ ದೇವ ಮಹಾಸ್ವಾಮೀಜಿಗಳು ನೂರಾರು ಪುಸ್ತಕಗಳನ್ನು ಬರೆದು, ಸಾವಿರಾರು ಗೀತೆಗಳನ್ನು ರಚಿಸಿ ಕರ್ನಾಟ, ಮಹಾರಾಷ್ಟ್ರ ಹಾಗೂ ಆಂದ್ರಪ್ರದೇಶಗಳಲ್ಲಿ ಕೈವಲ್ಯ ಪದ್ಧತಿ, ಸಿದ್ಧಾಂತ ಶಿಖಾಮಣಿ, ವಚನ ಸಾಹಿತ್ಯದ ಬಗ್ಗೆ ಅದ್ಬುತವಾದ ಪ್ರವಚನಗಳನ್ನು ನೀಡಿರುವ ಶ್ರೀಗಳು ನಮ್ಮ‌ ನಡುವೆ ನಿಜಗುಣ ದೇವ ಮಹಾಸ್ವಾಮೀಗಳಾಗಿ ಹೆಚ್ಚಿನ ಕಾರ್ಯ ಮಾಡಲಿ ಎಂದರು.

ಈ ಸಂದರ್ಭದಲ್ಲಿ ನಿಡಸೋಸಿಯ ಜಗದ್ಗುರುಗಳು ಆಶೀರ್ವಚನ ನೀಡಿ ಮಾತನಾಡಿ, ನಿಜಗುಣ ದೇವರು ಅದ್ವೈತ ಪರಂಪರೆಗೂ, ಪಂಚಾಚಾರ್ಯ, ವೀರಕ್ತ ಪರಂಪರೆಗೂ ಕೊಂಡೆ ಇದ್ದ ಹಾಗೆ ಇದ್ದಾರೆ. ಇವರ ಕೀರ್ತಿ ಇನ್ನೂ ಬೆಳಗಲಿ ಎಂದರು.


ಕಟಕೋಳ ಎಂ ಚಂದರಗಿಯ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಿಜಗುಣ ದೇವ ಮಹಾಸ್ವಾಮಿಗಳು ಎಲ್ಲ ಪರಂಪರೆಯ ಇತಿಹಾಸದ ಮಠಗಳನ್ನು ತಮ್ಮ ಕವನದಲ್ಲಿ ರಚಿಸಿ ನೂರಾರು ಭಕ್ತಿ ಸಿಡಿಗಳನ್ನು ಹೊರತಂದು ನಮಗೆಲ್ಲ ಮಾದರಿಯಾಗಿದ್ದಾರೆ ಎಂದರು.
ಹುಕ್ಕೇರಿ ವೀರಕ್ತಮಠದ ಶ್ರೀ ಶಿವಬಸವ ಶ್ರೀಗಳು ಮಾತನಾಡಿ, ನಿಜಗುಣ ದೇವರು ಹುಕ್ಕೇರಿಯ ಎರಡೂ ಮಠಗಳ ಜೊತೆಗೆ ಅವಿನಾಭಾವ ಸಂಬಂಧ ಇರುವುದು ನಮಗೆ ಸಂತೋಷ ತಂದಿದೆ ಎಂದರು.

ಮಾಜಿ ಶಾಸಕರಾದ ಬಿ.ಸಿ.ಸರಿಕರ, ಹುಕ್ಕೇರಿಯ ಸಿಪಿಐ ಬಸಾಪುರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button