Belagavi NewsBelgaum NewsKannada NewsKarnataka NewsLatestPolitics

*ನಿಪ್ಪಾಣಿ ಕ್ಷೇತ್ರದ 4 ಸೇತುವೆ ನಿರ್ಮಾಣಕ್ಕೆ 5 ಕೋಟಿ ರೂ ಅನುದಾನ ಮಂಜೂರು: ಶಾಸಕಿ ಶಶಿಕಲಾ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ: ನಿಪ್ಪಾಣಿ ಕ್ಷೇತ್ರದ 4 ಸೇತುವೆ ನಿರ್ಮಾಣಕ್ಕೆ 5 ಕೋಟಿ ರೂ ಅನುದಾನ ಮಂಜೂರು ಮಾಡಲಾಗಿದೆ ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಾಹಿತಿ ನೀಡಿದ್ದಾರೆ.

Home add -Advt

1.ನಿಪ್ಪಾಣಿ ಕ್ಷೇತ್ರದ ಕೋಡ್ನಿ ಗಾಯಕನವಾಡಿಯಿಂದ ಮಾರ್ಗ ಮಧ್ಯೆ ಇರುವ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಲು 3 ಕೋಟಿ ರೂ.ಅನುದಾನ ಮಂಜೂರು.

2.ಬೆನಾಡಿ ಹೂನ್ನರಗಿ ಮಾರ್ಗದ ಮಧ್ಯೆ ಇರುವ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಲು 70 ಲಕ್ಷ ರೂಪಾಯಿ ಅನುದಾನ ಮಂಜೂರು.

3.ಮಾನಕಾಪುರ ಗ್ರಾಮದಿಂದ ಸ್ಟಾರ್ ಫ್ಯಾಕರಿಗೆ ಹೋಗುವ ಮುಖ್ಯ ರಸ್ತೆಯಿಂದ ಧನಗರ ಮಾಲಾ ಹತ್ತಿರ ಇರುವ ಹಳ್ಳಕ್ಕೆ ಸೇತುವೆ ನಿರ್ಮಾಣ. ಮಾಡಲು 40 ಲಕ್ಷ ರೂ ಅನುದಾನ ಮಂಜೂರು.

4.ಹಂಚಿನಾಳ ಗ್ರಾಮದ ಕನಕಾಲಿ ಸೇತುವೆ ನಿರ್ಮಾಣ ಮಾಡಲು 90 ಲಕ್ಷ ರು ಅನುದಾನ ಮಂಜೂರು.

ಅದಷ್ಟು ಬೇಗನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಉತ್ತಮ ಗುಣಮಟ್ಟದ ಕಾಮಗಾರಿ ಪ್ರಾರಂಭ ಮಾಡಲಾಗುವುದು.

ನಿಪ್ಪಾಣಿ ಕ್ಷೇತ್ರದಲ್ಲಿ ರಸ್ತೆ,ಸೇತುವೆ,ಚರಂಡಿ, ಸೇತುವೆ, ದೇವಸ್ಥಾನ ಅಭಿವೃದ್ಧಿ ಹೀಗೆ ಹಲವಾರೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Related Articles

Back to top button