ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಟಿ.ಜಿ.ಟಿ ಶಿಕ್ಷಕರು ಸಹ ನಿಷ್ಠಾ ಆನ್ ಲೈನ್ ತರಬೇತಿ ಪಡೆಯಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ರಾಜ್ಯದ ಎಲ್ಲಾ ಪ್ರಾಥಮಿಕ ಶಿಕ್ಷಕರು (ಟಿ.ಜಿ.ಟಿ ಶಿಕ್ಷಕರು ಸೇರಿ) 1ನೇ ತರಗತಿಯಿಂದ 8ನೇ ತರಗತಿ ಭೋಧಿಸುವ ಶಿಕ್ಷಕರಿಗೆ ನಿಷ್ಠಾ -೧ ತರಬೇತಿ ಪಡೆಯಬೇಕು ಎಂದು DSERT ನಿಷ್ಠಾ ಆನ್ ಲೈನ್ ತರಬೇತಿಯ ರಾಜ್ಯ ನೋಡಲ್ ಅಧಿಕಾರಿ ವೇದಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಈ ಮೊದಲು ಟಿಜಿಟಿ ಶಿಕ್ಷಕರಿಗೆ ನಿಷ್ಠಾ ತರಬೇತಿ ಇಲ್ಲ ಎನ್ನುವ ಮಾಹಿತಿ ಹೊರಬಿದ್ದಿತ್ತು. ಆದರೆ ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.
ಒಟ್ಟೂ 3 ಮಾಡ್ಯುಲ್ ಗಳ 6 ಕೊರ್ಸ್ ಗಳನ್ನು ಜನವರಿ 31ರೊಳಗಾಗಿ ಪೂರ್ಣಗೊಳಿಸಬೇಕಿದೆ. ನಿಷ್ಠಾ -2 ತರಬೇತಿ ಪ್ರೌಢ ಶಾಲಾ ಶಿಕ್ಷಕರಿಗೂ ಬರಲಿದೆ ಎನ್ನುವ ಮಾಹಿತಿ ಬಂದಿದ್ದು, ಇನ್ನಷ್ಟೆ ಖಚಿತವಾಗಬೇಕಿದೆ. ವಿಶೇಷವೆಂದರೆ ಪ್ರೌಢ ಶಾಲೆ ಶಿಕ್ಷಕರಿಗೆ ಈಗಾಗಲೆ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಬಂದಿದೆ.
ಸಧ್ಯಕ್ಕೆ 1 ರಿಂದ 8ನೇ ತರಗತಿಯ ಎಲ್ಲ ಮಾದರಿಯ ಶಿಕ್ಷಕರಿಗೂ ಈ ತರಬೇತಿ ಕಡ್ಡಾಯವಾಗಿದೆ.
ಆದರೆ ನಿಷ್ಠಾ ತರಬೇತಿ ಲಾಗಿನ್ ಆಗಲು ಸಮಸ್ಯೆ ಉಂಟಾಗುತ್ತಿದೆ ಎಂದು ಅನೇಕ ಶಿಕ್ಷಕರು ದೂರು ನೀಡುತ್ತಿದ್ದಾರೆ. ತಾಂತ್ರಿಕ ಸಮಸ್ಯೆಯನ್ನು ಇಲಾಖೆ ಪರಿಹರಿಸಬೇಕಿದೆ.
ಈ ಮಧ್ಯೆ ಶಿಕ್ಷಕರು ಸೋಮವಾರದಿಂದಲೇ ಶಾಲೆಗಳಿಗೆ ಹಾಜರಾಗುತ್ತಿದ್ದು, ಮಕ್ಕಳು ಯಾವಾಗ ಹಾಜರಾಗಬೇಕು ಎನ್ನುವ ಕುರಿತು 2 -3 ದಿನದಲ್ಲಿ ಸರಕಾರದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಈ ಸಂಬಂಧ ಮಂಗಳವಾರ ಮಹತ್ವದ ಸಭೆ ನಡೆಯಲಿದೆ.
ಈ ಕೆಳಗಿನ ಸುದ್ದಿ, ಓದಿ –
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ