ಪ್ರಗತಿವಾಹಿನಿ ಸುದ್ದಿ, ಯರಗಟ್ಟಿ : ಸ್ಥಳೀಯ ಎಪಿಎಂಸಿ ಆವರಣ ಮುಂಭಾಗದ ಪಿಡ್ಲೂಡಿ ಜಾಗದಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ಶೆಡ್ ಗಳನ್ನು ಸ್ಥಳೀಯ ಪಿ ಡಬ್ಲ್ಯೂ ಇಂಜಿನಿಯರ್, ಪಿಎಸ್ ಐ, ಎಎಸ್ ಐ ಹಾಗೂ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಸರ್ಕಾರ ಯರಗಟ್ಟಿಯನ್ನು ನೂತನ ತಾಲೂಕಾಗಿ ಘೋಷಿಸಿದೆ. ರಾಜ್ಯೋತ್ಸವ ದಿನದಂದು ತಹಸಿಲ್ದಾರ ಕಛೇರಿ ಉದ್ಘಾಟನೆ ಮಾಡಲಾಗಿದ್ದು, ಯರಗಟ್ಟಿಯನ್ನು ಅಭಿವೃದ್ಧಿ ಮಾಡಲು ಸರ್ಕಾರದ ಅಧಿಕಾರಿಗಳು, ಆಡಳಿತ ಮಂಡಳಿ ಕೆಲಸ ಮಾಡುತ್ತಿದೆ.
ಸಹಾಯಕ ಕಾರ್ಯನಿವಾಹಕ ಇಂಜಿನಿಯರ್ ಕದ್ರಾಪೂರ, ಉಪ ಸಹಾಯಕ ಕಾರ್ಯನಿವಾಹಕ ಇಂಜಿನಿಯರ್ ವಿನಾಯಕ ಪೂಜೇರ, ಪಿಎಸ್ಐ ಪ್ರವೀಣ ಗಂಗೊಳ್ಳಿ, ಎಎಸ್ಐ ಎಫ್ ವಾಯ್ ಮಲ್ಲೂರ ಹಾಗೂ ಇನ್ನುಳಿದ ಪೊಲೀಸ್ ಸಿಬ್ಬಂದಿ ಉಪಸ್ಥಿತಿಯಲ್ಲಿ ತೆರವುಗೊಳಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ