Belagavi NewsBelgaum NewsKarnataka News

*ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ವಿರುದ್ಧ ಅವಿಶ್ವಾಸ ನಿರ್ಣಯ: ಅಧ್ಯಕ್ಷರ ಬದಲಾವಣೆ ಸಾಧ್ಯತೆ*

ಪ್ರಗತಿವಾಹಿನಿ ಸುದ್ದಿ: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬಿಜೆಪಿಯ ಬೆಳಗಳಿ ಪ್ರಕಾಶ್ ವಿರುದ್ಧ ಬ್ಯಾಂಕ್ ನ ಎಂಟು ಜನ ಸದಸ್ಯರು ಅಸಮಾದಾನ ಹೊರ ಹಾಕಿರುವ ಕಾರಣ ಬೆಳ್ಳಿ ಪ್ರಕಾಶ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ.

ಈ ಸದಸ್ಯರು ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದಾರೆ. ಲಕ್ಷ್ಮಣ ಸವದಿ, ಎಂ.ಸಿ.ಸುಧಾಕರ್, ಅರೆಬೈಲು ಶಿವರಾಮ ಹೆಬ್ಬಾರ್, ಮಂಜುನಾಥಗೌಡ, ರವಿ ಸೇರಿದಂತೆ ಒಟ್ಟು ಎಂಟು ಜನರು ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದಾರೆ.

ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ದೇವರಾಜು ಅವರಿಗೆ ತಮ್ಮ ಅವಿಶ್ವಾಸ ನಿರ್ಣಯ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳಲ್ಲಿ ಅಧ್ಯಕ್ಷರ ಮರು ಆಯ್ಕೆಯಾಗುವ ಸಂಭವವಿದ್ದು ಬೆಳ್ಳಿ ಪ್ರಕಾಶ್ ಅವರು ಅಧಿಕಾರದಿಂದ ಇಳಿಯುವುದು ಬಹುತೇಕ ಖಚಿತ ಎಂದು ತಿಳಿದುಬಂದಿದೆ. ಎಂಎಲ್‌ಸಿ ರವಿ ಮತ್ತು ಲಕ್ಷ್ಮಣ ಸವದಿ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆಂದೂ ಹೇಳಲಾಗುತ್ತಿದೆ.

Home add -Advt

Related Articles

Back to top button