Kannada NewsKarnataka News

ಇದ್ದಲಹೊಂಡ ಸಾಹಿತ್ಯ ಸಮ್ಮೇಳನಕ್ಕೆ ಮರಾಠಿ ಸಾಹಿತಿಗಳಿಗೆ ನೋ ಎಂಟ್ರಿ

 ಪ್ರಗತಿವಾಹಿನಿ ಸುದ್ದಿ, ಖಾನಾಪುರ -ಖಾನಾಪುರ ತಾಲೂಕಿನ ಇದ್ದಲಹೊಂಡದಲ್ಲಿ ಆಯೋಜಿಸಿದ್ಧ ಗುಂಫನ್ ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ಧ ಮಹಾರಾಷ್ಟ್ರದ ಸಾಹಿತಿಗಳು ಮತ್ತು ಸಂಯೋಜಕರನ್ನು ಗ್ರಾಮದೊಳಗೆ ಪ್ರವೇಶಿಸದಂತೆ ಪೊಲೀಸರು ತಡೆದಿದ್ದಾರೆ.

ರವಿವಾರ ಖಾನಾಪುರ ತಾಲೂಕಿನ ಇದ್ದಲಹೊಂಡದಲ್ಲಿ ಗುಂಫನ್ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗವಹಿಸಲು ಮಹಾರಾಷ್ಟ್ರದ ಸಾಹಿತಿ ಡಾ. ಬಸವೇಶ್ವರ ಚಿನಗೆ, ಗಜಾನನ ಚಿನಗೆ, ಟಿ.ಕೆ. ಪಂಡಿತ, ಶ್ರೀಪಾಲ ಸಬ್ನಿಸ್ ಹಾಗೂ ಬೆಳಗಾವಿಯ ಸಮ್ಮೇಳನದ ಆಯೋಜಕರಾದ ಗುಣವಂತ ಪಾಟೀಲ ಆಗಮಿಸುತ್ತಿದ್ದರು. ಆದರೆ ಅವರನ್ನು ರಾಜ್ಯ ಹೆದ್ದಾರಿಯ ಇದ್ದಲಹೊಂಡ ಕ್ರಾಸ್‍ನಲ್ಲಿಯೇ ಪೊಲೀಸರು ತಡೆಹಿಡಿದ್ದಾರೆ.

ಈ ವೇಳೆ ಮಾತನಾಡಿದ ಸಾಹಿತಿ ಡಾ. ಬಸವೇಶ್ವರ ಚಿನಗೆ ಕರ್ನಾಟಕದ ಪೊಲೀಸರು ಇದ್ದಲಹೊಂಡಕ್ಕೆ ಪ್ರವೇಶಿಸದಂತೆ ತಡೆಹಿಡಿದ್ದಿದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಾಹಿತ್ಯ ಯಾವುದೇ ಭಾಷೆಯದ್ದಾಗಿರಲಿ ಅದಕ್ಕೆ ಆದರವನ್ನು ಮಾಡಬೇಕೆಂದು ಹೇಳಿದರು.

ಪೊಲೀಸರ ಆಜ್ಞೆಯನ್ನು ಮೀರಿ ಗ್ರಾಮಕ್ಕೆ ಪ್ರವೇಶಿಸಿದರೆ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡುತ್ತಿದ್ದಂತೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮಹಾರಾಷ್ಟ್ರಕ್ಕೆ ತಿರುಗಿ ಹೋಗಬೇಕಾಯಿತು. ಸಮ್ಮೇಳನದಲ್ಲಿ ಯಾವುದೇ ರೀತಿಯ ಗಡಿ ವಿವಾದಕ್ಕೆ ಆಸ್ಪದ ಸಿಗದಿರಲಿ ಎಂದು ಪೋಲಿಸರು ಈ ರೀತಿಯ ಮುಂಜಾಗೃತಾ ಕ್ರಮ ಕೈಕೊಂಡಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button