
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಹಲವು ಔಷಧಿಗಳ ಮೇಲೆ ಜಿಎಸ್ ಟಿ( ಸರಕು ಮತ್ತು ಸೇವಾ ತೆರಿಕೆ) ಕಡಿತ ಮಾಡಲಾಗಿದ್ದು, ಬ್ಲ್ಯಾಕ್ ಫಂಗಸ್ ಔಷಧಿಗಳಿಗೆ ಯಾವುದೇ ತೆರಿಗೆ ಇಲ್ಲ ಎಂದು ಜಿಎಸ್ ಟಿ ಮಂಡಳಿ ತಿಳಿಸಿದೆ.
ಜಿಎಸ್ ಎಸ್ ಟಿ ಕೌನ್ಸಿಲ್ ಸಭೆ ಬಳಿಕ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರೆಮ್ ಡಿಸಿವಿರ್ ಇಂಜಕ್ಷನ್ ಮೇಲಿನ ಜಿಎಸ್ ಟಿ ಶೇ.5ಕ್ಕೆ ಇಳಿಸಲಾಗಿದ್ದು, ವೆಂಟಿಲೇಟರ್ ಮೇಲಿನ ಜಿಎಸ್ ಟಿ ಕೂದ ಶೇ.5ಕ್ಕೆ ಇಳಿಕೆ ಮಾಡಲಾಗಿದೆ. ಆಂಬುಲೆನ್ಸ್ ಮೇಲಿನ ತೆರಿಗೆಯಲ್ಲಿಯೂ ವಿನಾಯಿತಿ ನೀಡಲಾಗಿದೆ ಎಂದರು.
ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆನೀಡಲಾಗುವ ಔಷಧಿಗಳಿಗೆ ಸಂಪುರ್ಣ ತೆರಿಗೆ ವಿನಾಯಿತಿ ನೀಡಲಾಗಿದ್ದು, ಟೋಸಿಲಿಜುಮಾಬ್, ಅಂಫೋಟೆರಿಸಿನ್ ಬಿ ಇಂಜಕ್ಷನ್ ಮೇಲೆ ಜಿಎಸ್ ಎಸ್ ಟಿ ತೆರಿಗೆ ಇರುವುದಿಲ್ಲ. ಕೊರೊನಾ ಟೆಸ್ಟಿಂಗ್ ಕಿಟ್, ಆಕ್ಸಿಜನ್ ಕಾನ್ಸಟ್ರೇಟರ್, ವೆಂಟಿಲೆಟರ್ ಮಾಸ್ಕ್ ಹಾಗೂ ಪಲ್ಸ್ ಆಕ್ಸಿಮೀಟರ್ ಮೇಲಿನ ಜಿಎಸ್ ಟಿ ಶೇ.12ರಿಂದ ಶೇ.5ಕ್ಕೆ ಇಳಿಕೆ ಮಾಡಲಾಗಿದೆ ಎಂದು ಹೇಳಿದರು.
ಕೊರೊನಾ ಲಸಿಕೆ ಮೇಲಿನ ಜಿಎಸ್ ಟಿ ಶೇ.5ರಷ್ಟು ಮುಂದುವರೆಯಲಿದ್ದು, ಶೇ.75ರಷ್ಟು ಕೋವಿಡ್ ಲಸಿಕೆಯನ್ನು ಕೇಂದ್ರ ಸರ್ಕಾರವೇ ಖರೀದಿ ಮಾಡುತ್ತಿರುವುದರಿಂದ ಲಸಿಕೆ ಮೇಲಿನ ಜಿಎಸ್ ಟಿಯಿಂದ ಜನರಿಗೆ ಹೊರೆಯಾಗಲಾರದು ಎಂದು ತಿಳಿಸಿದರು.
ಚಾಮರಾಜಪೇಟೆಯಿಂದ ಸ್ಪರ್ಧೆ; ಸಿದ್ದರಾಮಯ್ಯ ಹೇಳಿದ್ದೇನು?