
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :
ಯಾವ ಧರ್ಮವೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ದೇಶದಲ್ಲಿ ಶಾಂತಿ ಕದಡುವ ಯಾವುದೇ ಶಕ್ತಿಯನ್ನು ಯಾರೂ ಬೆಂಬಲಿಸಬಾರದು. ಎಲ್ಲರೂ ಒಟ್ಟಾಗಿ ದೇಶ ಕಟ್ಟುವ ಕೆಲಸ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು* *ಅಲ್ಪಸಂಖ್ಯಾತರ* *ಕಲ್ಯಾಣ* , *ಹಜ್ ಮತ್ತು ವಕ್ಫ್* ಇಲಾಖೆಯ ವತಿಯಿಂದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮತ್ತು *ಉರ್ದು ಅಕಾಡೆಮಿ ಇದರ* ನೂತನ ಕಛೇರಿಗಳ ಸಂಕೀರ್ಣ “ *ಕೆ.ಎಂ.ಡಿ.ಸಿ. ಭವನ”ದ* ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಅನೇಕ ಧರ್ಮಗಳು ಹುಟ್ಟಿವೆ. ಎಲ್ಲರೂ ಮೊದಲು ನಮ್ಮ ದೇಶವನ್ನು ಪ್ರೀತಿಸೋಣ. ಎಲ್ಲರೂ ಮಾತೃಭೂಮಿಯನ್ನು ಪೂಜಿಸಬೇಕು. ಶಿಕ್ಷಣ, ಉದ್ಯೋಗ, ಸಬಲೀಕರಣ ವನ್ನು ಸಾಧಿಸಲು ಅಲ್ಪಸಂಖ್ಯಾತರು ಸಂಘಟಿತರಾಗಬೇಕು. ದೇಶದ್ರೋಹದ ಕೃತ್ಯಗಳಿಗೆ ಯಾರೂಬೆಂಬಲ ನೀಡಬಾರದು ಮತ್ತು ಅಂತಹ ಕಿಡಿಗೇಡಿಗಳ ವಿರುದ್ಧ ಎದ್ದುನಿಲ್ಲಬೇಕೆಂದು ಅಲ್ಪಸಂಖ್ಯಾತರಿಗೆ ಕರೆ ನೀಡಿದರು. ಆಗ ಮಾತ್ರ ಸಮಾಜದಲ್ಲಿ ಸೌಹಾರ್ದತೆ ಬೆಳೆಯಲು ಸಾಧ್ಯ ಎಂದರು. ನನ್ನ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ನನಗೆ ಪ್ರಾರ್ಥನೆ ಮಾಡಿ ಎಂದು ತಿಳಿಸಿದರು.
*ಸಮುದಾಯದವರ ಚಿಂತನೆ ಬದಲಾಗಬೇಕು :*
ಅಲ್ಪಸಂಖ್ಯಾತ ಸಮುದಾಯದಲ್ಲಿ ಹೆಣ್ಣುಮಕ್ಕಳು ಬುದ್ಧಿವಂತರಿದ್ದಾರೆ. ಸಮುದಾಯದಲ್ಲಿ ಹೆಚ್ಚು ಜನ ಶಿಕ್ಷಣ ಪಡೆಯುತ್ತಿದ್ದಾರೆ. 21 ನೇ ಶತಮಾನ ಜ್ಞಾನದ ಶತಮಾನ. ಅಲ್ಪ ಸಂಖ್ಯಾತರನ್ನು ಕತ್ತಲಲ್ಲಿ ಇಡಲಾಗಿದೆ. ಸಮುದಾಯದವರ ಚಿಂತನೆ ಬದಲಾಗಬೇಕು. ನಾನು ಹೇಳೊದು ಕೆಲವರಿಗೆ ಇಷ್ಟ ಆಗೋದಿಲ್ಲ. ಅಲ್ಪ ಸಂಖ್ಯಾತ ಮಕ್ಕಳ ಕೈಯಲ್ಲಿ ಪೆನ್ನು ಪೆನ್ಸಿಲ್ ಇರಬೇಕೊ ಅವರ ಕೈಯಲ್ಲಿ ಪಾನಾ ಪಕ್ಕಡ್ ಇದೆ. ಬೆನ್ನ ಮೇಲೆ ಸ್ಕೂಲ್ ಬ್ಯಾಗ್ ಇರಬೇಕೊ ಅವರ ಬೆನ್ನಮೇಲೆ ಜೋಳ, ಅಕ್ಕಿಯ ಚೀಲಇದೆ ಅವರಿಗೆ ಓದುವ ಹಕ್ಕಿದೆ. ಈ ಬಗ್ಗೆ ಹಿಂದಿನ ಸರ್ಕಾರಗಳು ಏಕೆ ಯೋಚನೆ ಮಾಡಲಿಲ್ಲ ಎಂದರು.
ಅಬ್ದುಲ್ ಅಜೀಂ ಅತ್ಯುತ್ತಮ ಅಧಿಕಾರಿಯಾಗಿದ್ದರು. ಅವರಂತೆ ಇಂದಿನ ಮಕ್ಕಳು ಯಶಸ್ವಿಯಾಗಬೇಕು. ನಮ್ಮ ಸರ್ಕಾರದ ಬಗ್ಗೆ ಆರೋಪ ಮಾಡುತ್ತಾರೆ. ನನ್ನ ಆರ್ಥಿಕ ಕಾರ್ಯದರ್ಶಿ ಶ್ರೀ ಜಾಫರ್ ಹಾಗೂ ಕೊವಿಡ್ ಸಂದರ್ಭದಲ್ಲಿ ಶ್ರಮವಹಿಸಿದ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳು ಶ್ರೀ ಜಾವೇದ್ ಅಖ್ತರ್ ಅಲ್ಪಸಂಖ್ಯಾತರು. ಈಗ ಬೆಂಗಳೂರಿನಲ್ಲಿ ವಾಹನ ದಟ್ಟಣೆ ನಿರ್ವಹಿಸಲು ವಿಶೇಷ ಆಯುಕ್ತರ ಹುದ್ದೆಗೆ ಶ್ರೀ ಸಲೀಂ ಅವರನ್ನು ನೇಮಕ ಮಾಡಲಾಗಿದೆ ಎಂದರು.
*ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ 1460 ಕೋಟಿ ರೂ:*
ವಿದೇಶದಲ್ಲಿ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ, ಐಎಎಸ್ ಕೆಎಎಸ್ ತರಬೇತಿ ನಿಲ್ಲಿಸಲಾಗಿತ್ತು.ಅದನ್ನು ಪುನ: ಪ್ರಾರಂಭಿಸಲಾಗಿದೆ. ನಮ್ಮ ಸರ್ಕಾರ ಮೌಲಾನಾ ಆಜಾದ್ ಶಾಲೆ, 30 ಕ್ಕಿಂತ ಹೆಚ್ಚು ಸಿಬಿಎಸ್ ಸಿ ಕಲಿಸುವ ಅಬ್ದುಲ್ ಕಲಾಂ ಶಾಲೆಗಳು ಕರ್ನಾಟಕದಲ್ಲಿ ಯಶಸ್ವಿಯಾಗುತ್ತಿದೆ. ಈ ವಸತಿ ಶಾಲೆಗಳಿಗೆ ವಿದ್ಯಾರ್ಥಿ ವೇತನ ಗಳನ್ನು ಡಿಬಿಟಿ ಮೂಲಕ ನೀಡಲಾಗುತ್ತಿದೆ. ಅಲ್ಪಸಂಖ್ಯಾತರ ಶಾಲೆಗಳಿಗೆ 624 ಶಿಕ್ಷಕರನ್ನು ನಮ್ಮ ಸರ್ಕಾರ ನೇಮಕ ಮಾಡಿದೆ. ಈ ವರ್ಷ ಹಾಸ್ಟೆಲ್ ಗಳಲ್ಲಿ 2500 ಮಕ್ಕಳು ಹೆಚ್ಚುವರಿಯಾಗಿ ಸೇರಿಸಿಕೊಳ್ಳಲಾಗಿದೆ.1460 ಕೋಟಿ ರೂ. ಅನುದಾನವನ್ನು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿದೆ ಎಂದರು.
*ವಕ್ಪ್ ಆಸ್ತಿ ರಕ್ಷಣೆ:*
ವಕ್ಪ್ ಆಸ್ತಿ ವಶಪಡಿಸಿಕೊಳ್ಳುವವರೆಗೂ ವಕ್ಪ ಅಧ್ಯಕ್ಷರು ಕ್ರಮ ಕೈಗೊಳ್ಳಬೇಕು. ದೇವರ ಆಸ್ತಿ ಉಳಿಸುವ ಅವಕಾಶ ವಕ್ಪ್ ಅಧ್ಯಕ್ಷರಿಗೆ ಸಿಕ್ಕಿದೆ. ದೇವರ ಕೆಲಸ ಮಾಡಿ. ರಾಜ್ಯದಲ್ಲಿ 2500 ಎಕರೆ ವಕ್ಪ್ ಅಸ್ತಿ ಖಾಸಗಿಯವರಿಂದ ಕಬಳಿಕೆಯಾಗಿದೆ. ಅದನ್ನು ವಶಪಡಿಸಿಕೊಳ್ಳಲು ಸಮುದಾಯ ನಿಲ್ಲಬೇಕು. ನಿಮ್ಮ ಜೊತೆಗೆ ಸರ್ಕಾರವಿದೆ. ವಕ್ಫ್ ಮಂಡಳಿ ಮುಸ್ಲಿಂ ಸಮುದಾಯದ ಹಕ್ಕುಗಳ ರಕ್ಷಣೆಗೆ ಬದ್ಧರಾಗಿರಬೇಕು ಎಂದರು.
ಕ್ರಿಶ್ಚಿಯನ್ ಧರ್ಮ ಪ್ರಗತಿಪರ ಧರ್ಮ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರತಿ ಭಾನುವಾರ ಪ್ರಾರ್ಥಿಸುತ್ತಾರೆ. ಅವರ ಜೊತೆಗೂ ನನಗೆ ಒಳ್ಳೆಯ ಸಂಬಂಧ ಇದೆ. ಜೈನಧರ್ಮದ ಮಹಾವೀರರು ತ್ಯಾಗಮೂರ್ತಿಯಾಗಿದ್ದರು.ಶಾಂತಿ, ಅಹಿಂಸೆಯನ್ನು ಪ್ರತಿಪಾದಿಸಿರು ಎಂದು ತಿಳಿಸಿದರು.
https://pragati.taskdun.com/women-trying-to-impress-men-in-this-way-is-waste/
https://pragati.taskdun.com/border-dispute-formation-of-a-team-of-strong-senior-lawyers-cm-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ