
ನಾರ್ವೆ: ಏಕಾಏಕಿ ಬಿಲ್ಲು-ಬಾಣಗಳಿಂದ ದಾಳಿ ನಡೆಸಿದ ವ್ಯಕ್ತಿ, ಐದು ಜನರನ್ನು ಹತ್ಯೆ ಮಾಡಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಾರ್ವೆ ರಾಜಧಾನಿ ಓಸ್ಲೋದಲ್ಲಿ ನಡೆದಿದೆ.
ಇಲ್ಲಿನ ಕಾಂಗ್ಸ್ ಬರ್ಗ್ ಪಟ್ಟಣದ ಹಲವು ಭಾಗಗಳಲ್ಲಿ ಈ ವ್ಯಕ್ತಿ ಬಿಲ್ಲು ಬಾಣಗಳಿಂದ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳ ಪೈಕಿ ಓರ್ವ ಪೊಲೀಸ್ ಅಧಿಕಾರಿ ಕೂಡ ಇದ್ದಾರೆ ಎನ್ನಲಾಗಿದೆ.
ಸದ್ಯ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.