
ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಅರುಣ ಶಹಾಪುರ ಕೇಳಿದ ಪ್ರಶ್ನೆಗೆ CM ಉತ್ತರ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಹೊಸ ಪಿಂಚಣಿ ಯೋಜನೆ (NPS) ರದ್ದು ಮಾಡಿ ಹಳೆ ಪಿಂಚಣಿ ಯೋಜನೆ (OPS) ಜಾರಿಗೊಳಿಸುವ ಸುಳಿವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.
ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಅರುಣ ಶಹಾಪುರ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಅರುಣ ಶಹಾಪುರ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳಿಂದ ಉತ್ತರ ಬಂದಿರಲಿಲ್ಲ. ಹಾಗಾಗಿ, ನನಗೆ ಉತ್ತರ ಬಂದಿಲ್ಲ. ರಾಜ್ಯದ ಸರಕಾರಿ ನೌಕರರು ನಿಮ್ಮ ಮೇಲೆ ಅಪಾರವಾದ ಭರವಸೆ ಇಟ್ಟುಕೊಂಡಿದ್ದಾರೆ. ಅತ್ಯಂತ ಸರಳವಾದ ಪ್ರಶ್ನೆ ಇದೆ. ಬೇರೆ ರಾಜ್ಯಗಳಂತೆ ಇಲ್ಲೂ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಇದಕ್ಕೆ ಉತ್ತರಿಸಲು ಕಾಲಾವಕಾಶ ಏಕೆ ಬೇಕು ಎಂದು ಅರುಣ ಶಹಾಪುರ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಬೊಮ್ಮಾಯಿ, ಇದು ಪಾಲಿಸಿ ಚೇಂಜ್ ಆಗಬೇಕಿದೆ. ಬೇರೆ ರಾಜ್ಯಗಳಲ್ಲಿ ಮಾಡಿರುವುದನ್ನೂ ತರಿಸಿಕೊಳ್ಳುತ್ತಿದ್ದೇನೆ. ಹಣಕಾಸಿನ ವ್ಯವಸ್ಥೆಯಾಗಬೇಕಿದೆ. ಆದ್ದರಿಂದ ಈಗ ಉತ್ತರಿಸಿದರೆ ನಿಮಗೆ ಸಮಾಧಾನವಾಗುವುದಿಲ್ಲ. ಹಾಗಾಗಿ ಅಂತಹ ಉತ್ತರ ಕೊಡುವುದು ಬೇಡ ಎಂದು ಸುಮ್ಮನಿದ್ದೇನೆ. ರೆಗ್ಯುಲರ್ ಉತ್ತರ ಕೊಡಬೇಕೆಂದರೆ ಕೊಡುತ್ತೇನೆ ಎಂದು ಬೊಮ್ಮಾಯಿ ಹೇಳಿದರು.
ನಿರ್ಣಯ ಮಾಡಿ ಎಂದು ಅರುಣ ಶಹಾಪುರ ಕೋರಿದರು. ಅದಕ್ಕೆ ಮರು ಉತ್ತರಿಸಿದ ಬೊಮ್ಮಾಯಿ, ನಿರ್ಣಯ ಮಾಡಿ ನಿಮಗೆ ಉತ್ತರ ನೀಡುತ್ತೇನೆ ಎಂದರು.
NPS ರದ್ಧು ಮಾಡಿ OPS ಜಾರಿ ಮಾಡುತ್ತೀರಾ? ನೇರ ಪ್ರಶ್ನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಸದನದಲ್ಲಿ ಉತ್ತರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ