
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇಲ್ಲಿಯ ಶಾಂತಲಾ ನಾಟ್ಯಾಲಯದ 36ನೇ ವಾರ್ಷಿಕೋತ್ಸವದ ಅಂಗವಾಗಿ ನವೆಂಬರ್ 8ರಂದು ನೃತ್ಯೋಲ್ಲಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಮಾಮಿ ಗಂಗೆ ಎನ್ನುವ ವಿಶೇಷ ನೃತ್ಯರೂಪಕ ನಡೆಯಲಿದೆ.
ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಕೋನವಾಳ ಗಲ್ಲಿಯ ಲೋಕಮಾನ್ಯ ರಂಗಮಂದಿರದಲ್ಲಿ ಸಂಜೆ 5 ಗಂಟೆಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ನೃತ್ಯ ಚೂಡಾಮಣಿ ವೈಜಯಂತಿ ಕಾಶಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸ್ಯಾಂಕ್ವೇಲಿಯಂ ನಗರಸಭೆ ಚೇರಮನ್, ಸಾಮಾಜಿಕ ಕಾರ್ಯಕರ್ತೆ ಸಿದ್ಧಿ ಸಂದೇಶ ಪ್ರಭು ಮತ್ತು ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ವಿದ್ವಾನ್ ರೇಖಾ ಹೆಗಡೆ ಕೋರಿಯೋಗ್ರಫಿಯಲ್ಲಿ ನಮಾಮಿ ಗಂಗೆ ರೂಪಕದ ಜೊತೆಗೆ ನಾಟ್ಯಾಲಯದ ಮಕ್ಕಳಿಂದ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ನಮಾಮಿ ಗಂಗೆ ಅತ್ಯಂತ ವಿಶೇಷವಾದ ರೂಪಕವಾಗಿದ್ದು, ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ.




