Kannada NewsLatest

*ಲ್ಯಾಂಡಿಂಗ್ ವೇಳೆ ರನ್ ವೇಯಲ್ಲಿಯೇ ಧಗ ಧಗನೆ ಹೊತ್ತಿ ಉರಿದ ಪ್ರಯಾಣಿಕರ ವಿಮಾನ*

ಪ್ರಗತಿವಾಹಿನಿ ಸುದ್ದಿ; ಟೋಕಿಯೊ: ಭೂಕಂಪದಿಂದ ತತ್ತರಿಸಿರುವ ಜಪಾನ್ ನಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಟೋಕಿಯೋದ ಹನೆಡಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ವಿಮನವೊಂದು ನೋಡ ನೋಡುತ್ತಿದ್ದಂತೆಯೇ ರನ್ ವೇಯಲ್ಲಿಯೇ ಬೆಂಕಿಗಾಹುತಿಯಾಗಿದೆ.

367 ಪ್ರಯಾಣಿಕರಿದ್ದ ಜಪಾನ್ ಏರ್ ಲೈನ್ಸ್ ವಿಮಾನ ಹನೆಡಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ವಿಮನದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆ ಇಡೀ ವಿಮಾನವನ್ನು ವ್ಯಾಪಿಸಿದ್ದು, ರನ್ ವೇಯಲ್ಲಿಯೇ ವಿಮಾನ ಧಗ ಧಗನೆ ಹೊತ್ತಿ ಉರಿದಿದೆ.

Home add -Advt

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ವಿಮಾನ ಸಿಬ್ಬಂದಿಗಳು ಪ್ರಯಾಣಿಕರನ್ನು ರಕ್ಷಿಸಿದ್ದು, ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ ಎಂದು ತಿಳಿದುಬಂದಿದೆ.

Related Articles

Back to top button