ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಂಜಾನೆ ಏಕಾಏಕಿ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ ನರ್ಸಿಂಗ್ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ರಾಜಧಾನಿ ಬೆಂಗಳೂರಿನ ಈಜಿಪುರದಲ್ಲಿ ನಡೆದಿದೆ.
ಮುಂಜಾನೆ ಮನೆಯ ಕಾಲಿಂಗ್ ಬೆಲ್ ಶಬ್ದ ಕೇಳಿ ವಿದ್ಯಾರ್ಥಿನಿ ಬಾಗಿಲು ತೆರೆದಿದ್ದಾಳೆ ಏಕಾಏಕಿ ಒಳನುಗ್ಗಿದ ವ್ಯಕ್ತಿ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿ, ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ವಿದ್ಯಾರ್ಥಿನಿ ಜೋರಾಗಿ ಕಿರುಚಿದ್ದಾಳೆ. ರಕ್ಷಣೆಗಾಗಿ ಮೊರೆಯಿಟ್ಟಿದ್ದಾಳೆ.
ಯುವತಿಯ ಕೂಗಾಟ ಕೇಳಿ ಅಕ್ಕಪಕ್ಕದ ಮನೆಯವರು ಧಾವಿಸಿ ಬಂದಿದ್ದಾರೆ. ಆರೋಪಿಯನ್ನು ಹಿಡಿದು ವಿವೇಕನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಪರಿಚಿತ ಯುವಕನನ್ನು ಮುಶರಲ್ ಶೇಕ್ ಎಂದು ಗುರುತಿಸಲಾಗಿದೆ.
ಮನೆಗೆ ಯಾರೋ ಬಂದರು ಎಂದು ಕಾಲಿಂಗ್ ಬೆಲ್ ಶಬ್ದ ಕೇಳಿ ಬಾಗಿಲು ತೆರೆಯುವ ಮುನ್ನ ಒಮ್ಮೆ ಎಚ್ಚರಿಕೆವಹಿಸುವುದು ಉತ್ತಮ.
ಕಾಳಿ ಮಾತೆಯ ಬಗ್ಗೆ ಅವಹೇಳನಕಾರಿ ಪೋಸ್ಟರ್; ನಿರ್ದೇಶಕಿ ಲೀನಾ ಮಣಿ ಮೇಕಳೈ ವಿರುದ್ಧ ಆಕ್ರೋಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ